ಕರಾವಳಿಯಲ್ಲಿ ಚಳಿ ಚಳಿ !

ಉಡುಪಿ/ಮಂಗಳೂರು: ಕರಾವಳಿಯಲ್ಲಿ ಚಳಿ ಆರಂಭವಾಗಿದ್ದು ಉಷ್ಣಾಂಶದಲ್ಲಿ ಇಳಿಕೆಯಾಗಿದೆ.

ಯಾವಾಗಲೂ ಬಿಸಿಯ ವಾತಾವರಣ ಇರುವ ದ.ಕ, ಉಡುಪಿ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 20 ಡಿಗ್ರಿ ದಾಖಲಾಗಿದೆ.ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಮಂಗಳವಾರ ಬೆಳಗ್ಗೆ ಚಳಿಯ ವಾತಾವರಣ ಇತ್ತು. ಚಳಿ ವಾತಾವರಣದಿಂದ ಅಕಾಲಿಕ ಮಳೆಯಿಂದ ತತ್ತರಿಸಿದ್ದ ಕೃಷಿಕರು ಕೊಂಚ ನಿರಾಳರಾಗಿದ್ದಾರೆ.

ಚಾರ್ಮಾಡಿ ಸಹಿತ ಶಿರಾಡಿ ಘಾಟಿ ಪ್ರದೇಶಗಳಲ್ಲಿ ರಾತ್ರಿ ಸಂಚಾರ ದುರ್ಗಮವಾ ಗಿದ್ದು, ರಸ್ತೆ ಸಹಿತ ಎದುರಿನಿಂದ ಬರುವ ವಾಹನ ಕಾಣದಷ್ಟು ದಟ್ಟ ಮಂಜು ಆವರಿಸುತ್ತಿದೆ. ಕನಿಷ್ಠ 18ರಿಂದ 20 ಡಿಗ್ರಿ ವರೆಗೆ ವಾತಾವರಣ ತಂಪೇರುತ್ತಿದ್ದು, ಅದೇ ಮಧ್ಯಾಹ್ನ ಉತ್ತಮ ಬಿಸಿಲಿನ ವಾತಾವರಣವೂ ಕಂಡುಬರುತ್ತಿದೆ.

Latest Indian news

Popular Stories