ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಜಗಳ: ಇಳಕಲ್’ನಲ್ಲಿ ಎಂಟು ಮಂದಿ ಬಂಧನ

ಬಾಗಲಕೋಟೆ: ಖಾಸಗಿ ಟ್ಯೂಷನ್ ಒಂದರಲ್ಲಿ ಸೋಮವಾರ ಸಂಜೆ ತಲೆಗೆ ಟೋಪಿ ಧರಿಸಿದ್ದ ಸ್ನೇಹಿತನನ್ನು 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಬಾಲಕನೊಬ್ಬ ಲೇವಡಿ ಮಾಡಿದ ನಂತರ ಇಳಕಲ್ ನಲ್ಲಿ ಎರಡು ಧಾರ್ಮಿಕ ಗುಂಪುಗಳ ಸದಸ್ಯರ ನಡುವೆ ಸಂಘರ್ಷವೆರ್ಪಟ್ಟಿತ್ತು.

ಖಾಸಗಿ ಟ್ಯುಟೋರಿಯಲ್ ವೊಂದರಲ್ಲಿ ತರಗತಿಗೆ ಹಾಜರಾಗಿದ್ದ ಬಾಲಕನೊಬ್ಬ, ತಲೆಗೆ ಟೋಪಿಗೆ ಧರಿಸಿದ್ದ ಮತ್ತೊಬ್ಬ ಸ್ನೇಹಿತನನ್ನು ರೇಗಿಸಿದ್ದಾನೆ. ಇದರಿಂದ ಬೇಸರಗೊಂಡ ಬಾಲಕ ಪಿಎಫ್ ಐ ಸದಸ್ಯರಾಗಿದ್ದ ತನ್ನ ಪೋಷಕರಿಗೆ ದೂರು ನೀಡಿದ್ದಾನೆ. ತದನಂತರ ಅವರು ಮತ್ತೋರ್ವ ಬಾಲಕನನ್ನು ಭೇಟಿಯಾಗಿದ್ದು, ಕಪಾಳ ಮೋಕ್ಷ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಪಾಳ ಮೋಕ್ಷ ವಿಚಾರವನ್ನು ಬಾಲಕ ಹಿಂದೂ ಸಂಘಟನೆ ಸದಸ್ಯರಾಗಿದ್ದ ತನ್ನ ಸ್ನೇಹಿತರಿಗೆ ತಿಳಿಸಿದಾಗ, ಅವರು ಬಂದು, ಮುಸ್ಲಿಂ ಹುಡುಗ ಹಾಗೂ ಆತನ ಸ್ನೇಹಿತರಿಗೆ ಹೊಡೆದಿದ್ದಾರೆ. ಪಿಎಫ್.ಐ ಸದಸ್ಯರು 15 ವರ್ಷದ ಬಾಲಕನ ಸ್ನೇಹಿತ ಮೇಲೆ ಮತ್ತೆ ದಾಳಿ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಎರಡು ಗುಂಪಿನ ನಡುವೆ ಸಂಘರ್ಷ ವೇರ್ಪಟ್ಟಿದೆ ಎಂದು ಅವರು ಹೇಳಿದ್ದಾರೆ.

ಉಭಯ ಗುಂಪಿನ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ದೂರು ಇಳಕಲ್ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಕ್ಷುಲಕ ಕಾರಣಕ್ಕೆ ಎರಡು ಬಾಲಕರ ನಡುವೆ ನಡೆದ ಸಂಘರ್ಷವನ್ನು ಉಭಯ ಗುಂಪುಗಳು ದುರುಪಯೋಗಪಿಡಿಸಿದ್ದಾರೆ. ಎರಡು ಕಡೆಯಿಂದ ಎರಡು ಕೇಸ್ ದಾಖಲಿಸಿಕೊಂಡಿದ್ದೇವೆ ಎಂದು ಎಸ್ ಪಿ ಜಗಳಸರ್ ತಿಳಿಸಿದ್ದಾರೆ.

Latest Indian news

Popular Stories