ಗಡಿ ವಿವಾದ: ಶಾಂತಿ ಭಂಗ ಮಾಡಿದರೆ ತಕ್ಕ ಪಾಠ – ಎಡಿಜಿಪಿ ಅಲೋಕ್ ಕುಮಾರ್

ಬೆಳಗಾವಿ: ‘ತಮ್ಮ ಖಾಸಗಿ ಕಾರ್ಯಕ್ರಮಕ್ಕೆ ಬೆಳಗಾವಿಗೆ ಯಾರು ಬಂದರೂ ತಕರಾರು ಇಲ್ಲ. ಏನಾದರೂ ತರಲೆ- ತಂಟೆ ಮಾಡಿದರೆ,ಶಾಂತಿ ಭಂಗ ಮಾಡಿದರೆ ತಕ್ಕ ಪಾಠ ಕಲಿಸುತ್ತೇವೆ’ ಎಂದು‌ ಎಡಿಜಿಪಿ ಅಲೋಕ್‌ಕುಮಾರ್ ಎಚ್ಚರಿಸಿದರು.

ಮಹಾರಾಷ್ಟ್ರದ ಸಚಿವರಾದ ಚಂದ್ರಕಾಂತ ಪಾಟೀಲ ಹಾಗೂ ಶಂಭುರಾಜ್ ದೇಸಾಯಿ ಅವರು, ಡಿಸೆಂಬರ್ 3ರಂದು ಬೆಳಗಾವಿಯಲ್ಲಿ ಗಡಿ ವಿವಾದದ ವಿಚಾರವಾಗಿ ಸಭೆ ನಡೆಸಲಿರುವ ಬಗ್ಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ‘ಯಾರು ಬೇಕಾದರೂ ತಮ್ಮವರ ಮನೆಗೆ, ಮದುವೆಗೆ, ಊಟಕ್ಕೆ ಬಂದರೆ ನಾವು ಏನೂ ಮಾಡಲಾಗುವುದಿಲ್ಲ. ಶಾಂತಿ ಕದಡಿದರೆ ಎಂಇಎಸ್
ಪುಂಡರಾದರೂ ಸರಿ, ಯಾರಾದರೂ ಸರಿ, ಕಾನೂನು ಕ್ರಮ
ಕೈಗೊಳ್ಳುತ್ತೇವೆ’ ಎಂದರು.

‘ನ.30ರಂದು ಗಡಿ ವಿವಾದದ ವಿಚಾರ ಸುಪ್ರೀಂಕೋರ್ಟ್‌ನಲ್ಲಿ ಚರ್ಚೆಗೆ ಬರಲಿದೆ. ಅಲ್ಲಿನ ತೀರ್ಪು ಏನು ಬರುತ್ತದೆ ಎಂಬುದನ್ನು ನೋಡಿಕೊಂಡು ಭದ್ರತೆಗೆ ಕ್ರಮ ವಹಿಸಲಾಗುವುದು’ ಎಂದರು.

Latest Indian news

Popular Stories