ಗೋವಾದಲ್ಲಿ ಐಶಾರಾಮಿ ಬಂಗಲೆ: ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಗೆ ಸರ್ಕಾರದಿಂದ ನೋಟಿಸ್ ಜಾರಿ

ಪಣಜಿ: ಗೋವಾದ ಮೊರ್ಜಿಮ್ ನಲ್ಲಿರುವ ಐಶಾರಾಮಿ ವಿಲ್ಲಾವನ್ನು  ರಾಜ್ಯದ ಸಂಬಂಧಿತ ಅಧಿಕಾರಿಗಳಲ್ಲಿ ನೋಂದಾಯಿಸದೆ ಆನ್ ಲೈನ್ ನಲ್ಲಿ ಹೋಮ್ ಸ್ಟೇ ಎಂದು ಹಾಕಿರುವುದಕ್ಕೆ ಗೋವಾ ಪ್ರವಾಸೋದ್ಯಮ ಇಲಾಖೆ ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ನೋಟಿಸ್ ಜಾರಿ ಮಾಡಿದೆ .

ಡಿಸೆಂಬರ್ 8 ರಂದು ಅವರನ್ನು ವಿಚಾರಣೆಗೆ ಕರೆದಿದೆ. ಗೋವಾ ಪ್ರವಾಸಿ ವ್ಯಾಪಾರದ ನೋಂದಣಿ ಕಾಯಿದೆ 1982 ರ ಅಡಿಯಲ್ಲಿ ಹೋಮ್ ಸ್ಟೇ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. 

ಉತ್ತರ ಗೋವಾದ ಮೊರ್ಜಿಮ್ ನಲ್ಲಿರುವ ಐಶಾರಾಮಿ ವಿಲ್ಲಾ ಕಾಸಾ ವಿಳಾಸಕ್ಕೆ ಪ್ರವಾಸೋದ್ಯಮ ಇಲಾಕೆ ಉಪ ನಿರ್ದೇಶಕ ರಾಜೀಶ್ ಕಾಳೆ ಅವರು ನವೆಂಬರ್ 18 ರಂದು ನೋಟಿಸ್ ಕಳುಹಿಸಿದ್ದು,  ವೈಯಕ್ತಿಕ ವಿಚಾರಣೆಗಾಗಿ ಡಿಸೆಂಬರ್ 8 ರಂದು ಬೆಳಿಗ್ಗೆ 11 ಗಂಟೆಗೆ ತಮ್ಮ ಮುಂದೆ ಹಾಜರಾಗುವಂತೆ ಅದರ ಮಾಲೀಕರಾಗಿರುವ ಯುವರಾಜ್ ಸಿಂಗ್ ಅವರಿಗೆ ಸೂಚಿಸಿದ್ದಾರೆ.

ನಿಮ್ಮ ವಿಲ್ಲಾದಲ್ಲಿ ಅಕ್ರಮವಾಗಿ ಹೋಮ್ ಸ್ಟೇಯಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು  Airbnb ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಗುರುತಿಸಲಾಗುತ್ತಿದೆ ಎಂದು ನೋಟಿಸ್ ನಲ್ಲಿ ಹೇಳಲಾಗಿದೆ. 

ಗೋವಾದ ಐಶಾರಾಮಿ ಬಂಗಲೆಯಲ್ಲಿ  @Airbnb ಮೂಲಕ ಬರುವ ಆರು ಜನರ ಗುಂಪಿಗೆ ವಿಶೇಷ ವಾಸ್ತವ್ಯವನ್ನು ಆಯೋಜಿಸುವುದಾಗಿ ಯುವರಾಜ್ ಸಿಂಗ್ ಹೇಳಿರುವ ಟ್ವೀಟ್ ನ್ನು ಕೂಡಾ ಇಲಾಖೆ ಉಲ್ಲೇಖಿಸಿದೆ. 

Latest Indian news

Popular Stories