ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಹೇರಿದರೆ ಜನರು ಸಂಕಷ್ಟಕ್ಕೆ ಈಡಾಗುತ್ತಾರೆ; ರಮಾನಾಥ ರೈ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆಯ ಕೇರಳದಲ್ಲಿ ಸೋಂಕು ಪ್ರಮಾಣ ಹೆಚ್ಚಿದ್ದರೂ ಅಲ್ಲಿನ ಸರಕಾರ ಲಾಕ್‌ಡೌನ್‌, ವಾರಾಂತ್ಯ ಕರ್ಫ್ಯೂ ವಿಧಿಸದೆ ನಿಯಂತ್ರಿಸುತ್ತದೆ. ಜಿಲ್ಲಾಡಳಿತ ಇದೀಗ ಮತ್ತೇ ಲಾಕ್‌ಡೌನ್‌, ವೀಕೆಂಡ್‌ ಕರ್ಫ್ಯೂ ಅನುಸರಿಸಿದರೆ ಜನತೆ ಇನ್ನಷ್ಟು ಸಂಕಷ್ಟಕ್ಕೆ ಈಡಾಗಲಿದ್ದಾರೆ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಪೂರ್ವನಿಗದಿತ ಧಾರ್ಮಿಕ ಕಾರ್ಯಕ್ರಮಗಳು. ಬ್ರಹ್ಮಕಲಶೋತ್ಸವ, ಕಾಲಾವಧಿ ಉತ್ಸವ, ಜಾತ್ರೆ, ನೇಮ, ಕೋಲ, ಉರೂಸ್‌ ,ಸಾಂತ್‌ಮಾರಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು, ಹರಕೆ ಯಕ್ಷಗಾನಗಳು ಇವೆ. ಈ ಸಮಯದಲ್ಲೇ ಜಿಲ್ಲೆಯಲ್ಲಿ ಆರ್ಥಿಕ ಚೈತನ್ಯ ಎಂದರು.

ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರು ಮೇಕೆದಾಟು ಪಾದಯಾತ್ರೆಯನ್ನು ಡ್ರಾಮಾ ಎಂದು ಟೀಕಿಸಿರುವುದು ಹಾಸ್ಯಾಸ್ಪದವಾಗಿದೆ. ಅವರು ಎತ್ತಿನಹೊಳೆ ಯೋಜನೆ ವಿರುದ್ಧ ನಡೆಸಿದ ಪಾದಯಾತ್ರೆ ಜಗತ್ತಿನ ಅದ್ಭುತ ಡ್ರಾಮಾಗಳಲ್ಲಿ ಒಂದಾಗಿದೆ. ಅವರದ್ದೇ ಸರಕಾರವಿದ್ದರೂ ಇದನ್ನು ನಿಲ್ಲಿಸಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ರೈ ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಇಬ್ರಾಹಿಂ ಕೋಡಿಜಾಲ್‌, ಹರಿನಾಥ್‌, ಶಶಿಧರ ಹೆಗ್ಡೆ, ಅಬ್ದುಲ್‌, ಸಲೀಂ, ವಿಶ್ವಾಸ್‌ದಾಸ್‌, ಪ್ರಕಾಶ್‌ ಸಾಲಿಯನ್‌, ಸಾಹುಲ್‌ ಹಮೀದ್‌, ಅಪ್ಪಿ, ಲಾರೆನ್ಸ್‌ ಡಿಸೋಜ, ನೀರಜ್‌ಚಂದ್ರಪಾಲ್‌, ನಜೀರ್‌ ಬಜಾಲ್‌, ನವೀನ್‌ ಡಿಸೋಜ, ಆಶೋಕ್‌ ಡಿ.ಕೆ., ಗಣೇಶ್‌ ಪೂಜಾರಿ, ದೀಪಕ್‌ ಪೂಜಾರಿ, ಅರಿಫ್‌ ಬಾವ ಮತ್ತಿತರರು ಉಪಸ್ಥಿತರಿದ್ದರು.

Latest Indian news

Popular Stories