ನಾನ್ ಸಿಆರ್ ಜಡ್ ವ್ಯಾಪ್ತಿಯಲ್ಲಿ ಮುಳುಗಿ ಮರಳು ತೆಗೆಯುವ ಪದ್ಧತಿ ಅಳವಡಿಸುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಸಚಿವರೊಂದಿಗೆ ಶಾಸಕ ರಘುಪತಿ ಭಟ್ ಸಭೆ

ಕರ್ನಾಟಕದ ಕರಾವಳಿ ಭಾಗದ ಬಹು ವರ್ಷಗಳ ಬೇಡಿಕೆಯಾದ ಕರಾವಳಿ ನಿಯಂತ್ರಣವಲ್ಲದ ವಲಯ(non CRZ)ದಲ್ಲಿ ಸಾಂಪ್ರದಾಯಿಕ ಮಾನವಾಧಾರಿತ ಮುಳುಗಿ ಮರಳು ತೆಗೆಯುವ ಪದ್ಧತಿಗೆ ಅವಕಾಶ ಕಲ್ಪಿಸುವ ಬಗ್ಗೆ ಇಂದು ದಿನಾಂಕ 22-09-2022 ರಂದು ಶಾಸಕರಾದ ಶ್ರೀ ಕೆ ರಘುಪತಿ ಭಟ್ ಅವರು ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಶ್ರೀಯುತ ಹಾಲಪ್ಪ ಬಸಪ್ಪ ಆಚಾರ್ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದರು.

ಕರಾವಳಿ ನಿಯಂತ್ರಣ ವಲ್ಲದ ವಲಯ(NON CRZ)ದಲ್ಲಿ ಸಾಂಪ್ರದಾಯಿಕ ಮಾನವಾಧಾರಿತ ಮುಳುಗಿ ಮರಳು ತೆಗೆಯಲು ಅವಕಾಶ ಕಲ್ಪಿಸಲು ಬೇಡಿಕೆ ಇರುವುದರಿಂದ ಮರಳು ನೀತಿಗೆ ತಿದ್ದುಪಡಿ ತಂದು ಅವಕಾಶ ಕಲ್ಪಿಸುವ ಬಗ್ಗೆ ಚರ್ಚಿಸಿದರು.

ಗೃಹ ಸಚಿವರಾದ ಶ್ರೀಯುತ ಆರಗ ಜ್ಞಾನೇಂದ್ರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕರಾದ ರಮೇಶ್, ಉಪ ನಿರ್ದೇಶಕರಾದ ಲಕ್ಷ್ಮಮ್ಮ ಉಪಸ್ಥಿತರಿದ್ದರು.

Latest Indian news

Popular Stories