ಪಂಚರಾಜ್ಯಗಳ ಚುನಾವಣೆ: ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ

ನವದೆಹಲಿ: ಹೊಸ ಕೋವಿಡ್-19 ನಿಯಮಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಜ.08 ರಂದು ಪಂಚರಾಜ್ಯಗಳ ಚುನಾವಣೆಗೆ ದಿನಾಂಕವನ್ನು ಪ್ರಕಟಿಸಿದೆ.

ಪಂಜಾಬ್, ಉತ್ತರಾಖಂಡ್, ಗೋವಾ, ಮಣಿಪುರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಈ ವರ್ಷ ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯಲಿದ್ದು ಕೋವಿಡ್-19 ನಿಯಮಗಳ ಪಾಲನೆಯೊಂದಿಗೆ ಮತದಾನ ನಡೆಯಲಿದೆ.

ಕೋವಿಡ್-19 ಸುರಕ್ಷತಾ ಕ್ರಮಗಳ ಹಿನ್ನೆಲೆಯಲ್ಲಿ ಮತದಾನದ ಗಡುವನ್ನು 1 ಗಂಟೆ ಹೆಚ್ಚು ವಿಸ್ತರಿಸಲಾಗಿದೆ. ಹಾಗೂ ರಾಜಕೀಯ ಪಕ್ಷಗಳು ಹೆಚ್ಚು ವರ್ಚ್ಯುಯಲ್ ರ್ಯಾಲಿಗಳತ್ತ ಗಮನ ಹರಿಸಬೇಕೆಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಚುನಾವಣೆ ಎದುರಿಸಲಿರುವ 5 ರಾಜ್ಯಗಳಲ್ಲಿ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.

ಫೆ.10 ರಿಂದ ಮತದಾನ ಪ್ರಾರಂಭವಾಗಿ ಮಾ.7 ವರೆಗೆ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು ಮಾ.10 ಕ್ಕೆ ಫಲಿತಾಂಶ ಘೋಷಣೆಯಾಗಲಿದೆ. ಪಂಜಾಬ್, ಗೋವಾ, ಉತ್ತರಾಖಂಡ್ ಗಳಲ್ಲಿ ಫೆ.14 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದರೆ, ಮಣಿಪುರದಲ್ಲಿ ಫೆ.27 ರಂದು ಮೊದಲ ಹಂತ ಹಾಗೂ ಮಾ.03 ರಂದು 2 ನೇ ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ 7 ಹಂತದ ಚುನಾವಣೆ ನಡೆಯಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ 7 ಹಂತಗಳ ಮತದಾನ

ಫೆ.10 ರಂದು ಮೊದಲ ಹಂತದ ಮತದಾನ
ಫೆ.14- ದ್ವಿತೀಯ ಹಂತದ ಮತದಾನ
ಫೆ.20- ತೃತೀಯ ಹಂತ
ಫೆ.23-4 ನೇ ಹಂತ
ಫೆ.27-5 ನೇ ಹಂತ
ಮಾ.3 ರಂದು 6 ನೇ ಹಂತ
ಮಾ.07- 7 ನೇ ಹಂತ
ಮಾ.10 ರಂದು ಫಲಿತಾಂಶ

Latest Indian news

Popular Stories