ಪಶು ಸಂಗೋಪನಾ ಸಚಿವರ ತವರಲ್ಲಿ ರೈತರ ಗೋಳಾಟ

ಸಚಿವರಿಗೆ ಪಶುಗಳ ಮೇಲೆಯಿರುವ ಪ್ರೀತಿ ,ಸಾಕುವ ರೈತನ ಮೇಲಿಲ್ಲವೇ?

ವರದಿ: ದೇಶಮುಖ ಹಣಮಂತ


ಔರಾದ: ಪ್ರವಾಹ ಪರಿಹಾರ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ 200 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಬೀದರ್ ಜಿಲ್ಲೆಗೆ ಅನುದಾನ ಕೈ ತಪ್ಪಿರುವುದು ಬಿಜೆಪಿ ಸರ್ಕಾರಕ್ಕೆ ಕಲ್ಯಾಣ ಕರ್ನಾಟಕದ ಬಗ್ಗೆ ಇರುವ ಮಲತಾಯಿ ಧೋರಣೆ ಎತ್ತಿ ತೋರಿಸುತ್ತದೆ.

ಬೀದರ್ ಜಿಲ್ಲಾದ್ಯಂತ ಸತತ ಮಳೆಯ ಪ್ರವಾಹದಿಂದ ತೊಗರಿ, ಸೋಯಾಬೀನ್, ಹೆಸರು, ಉದ್ದು ಹಾಗೂ ಇನ್ನಿತರೆ ಮುಂಗಾರು ಹಂಗಾಮಿನ ಬಹುತೇಕ ಬೆಳೆಗಳು ಸಂಪೂರ್ಣವಾಗಿ ನಷ್ಟವಾಗಿದ್ದು, ಪರಿಹಾರದ ಅಸೆಯಲ್ಲಿರುವ ರೈತರಿಗೆ ಅಘಾತವಾಗಿದೆ ,

ಬಾಯಿ ಮಾತಿಗೆ ಅತಿವೃಷ್ಟಿ ಎಂದು ಘೋಷಿಸಲು ಅಸಾಧ್ಯ, ಅಧಿಕಾರಿಗಳ ಸಮೀಕ್ಷೆಯ ನಂತರ ನಿಖರ ಮಾಹಿತಿ ತಯಾರಿಸಿದರೆ ಅತಿವೃಷ್ಟಿ ತಾಲೂಕು ಎಂದು ಘೋಷಿಸಲು ಸಹಕಾರಿಯಾಗುತ್ತದೆ ಎಂದು ಕಳೆದ ಕೆಲವು ದಿನಗಳ ಹಿಂದೆ ಔರದ ಪಟ್ಟಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಚಿವ ಪ್ರಭು ಚವ್ಹಾಣ ಹೇಳಿದ್ದರು.

ಕಮಲನಗರ ಹಾಗೂ ಔರಾದ ತಾಲೂಕಿನಲ್ಲಿ ಮಳೆಯಿಂದ ಹೆಚ್ಚು ಹಾನಿಯಾಗಿದೆ, ಎಲ್ಲ ಹೊಲಗಳಲ್ಲಿ ನೀರು ನಿಂತಿದೆ 400ಕ್ಕೂ ಜಾಸ್ತಿ ಮನೆಗಳ ಗೋಡೆ ಬಿದ್ದಿವೆ. ಸೇತುವೆಗಳಿಗೆ ಹಾನಿಯಾಗಿದೆ. ರಸ್ತೆಗಳು ಕಿತ್ತುಹೋಗಿವೆ. ಕೆರೆಗಳಿಗೂ ಹಾನಿ ಸಂಭವಿಸಿದೆ ಎಲ್ಲಾ ಮಾಹಿತಿ ಕೊಟ್ಟರೆ ಮುಖ್ಯಮಂತ್ರಿ ಬಳಿ ಹೋಗಿ ಅತಿವೃಷ್ಟಿ ತಾಲ್ಲೂಕು ಎಂದು ಘೋಷಣೆ ಮಾಡಿಸುತ್ತೇನೆ ಎಂದು ಹೇಳಿದರು.

ಅದರೆ ನಿನ್ನೆ ಬೊಮ್ಮಾಯಿಯವರು ಬಿಡುಗಡೆ ಪರಿಹಾರದಲ್ಲಿ ಬೀದರ ಜಿಲ್ಲೆಗೆ ಒಂದು ನಯಾ-ಪೈಸ್ ಕೂಡ ದೊರೆತ್ತಿಲ್ಲ ,ಹಾಗಾದರೆ ಅಂದು ಸಭೆಯಲ್ಲಿ ಸಚಿವರು ಹೇಳಿದ್ದು ಸುಳ್ಳಾ? ಖುದ್ದಾಗಿ ಸಚಿವರೇ ಅನೇಕ ರೈತರ ಹೊಲಗಳಿಗೆ ಹೋಗಿ ಬೆಳೆ ಪರಿಶೀಲಿಸಿದ್ದರು ಹಾಗಾದರೆ ತಾಲ್ಲೂಕಿನಲ್ಲಿ ಬೆಳೆ ಹಾನಿ ಅಗಿಲ್ಲವ್ವ? ಬೆಳೆ ಹಾನಿಯಾದರೆ ಔರದ ತಾಲ್ಲೂಕಿಗೆ ಪರಿಹಾರ ಯಾಕೆ ದೊರಕಿಲ್ಲ ? ಸಚಿವರಿಗೆ ಪಶುಗಳ ಮೇಲೆ ಇರುವ ಪ್ರೀತಿ ,ಸಾಕುವ ರೈತರ ಮೇಲಿಲ್ಲವೇ ? ಅಧಿಕಾರಿಗಳು ವರದಿ ತಯಾರಿಸುವಲ್ಲಿ ವಿಫಲರಾದರೊ.? ಇಲ್ಲ ಸರ್ಕಾರದ ಜೊತೆ ಚರ್ಚೆ ನಡೆಸುವಲ್ಲಿ ಸಚಿವರು ವಿಫಲರಾದರೊ..? ಎಂಬ ಪ್ರಶ್ನೆಗಳು ತಾಲ್ಲೂಕಿನ ಜನರಲ್ಲಿ ಕಾಡುತ್ತಿವೆ.

Latest Indian news

Popular Stories