ಪ್ರತಿಭಟನೆ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗಿ: ಅತಿಥಿ ಉಪನ್ಯಾಸಕರಿಗೆ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಮನವಿ

ಬೆಂಗಳೂರು: ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರ ಪರಿಗಣಿಸಿದ್ದು, ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಭಾನುವಾರ ಮನವಿ ಮಾಡಿಕೊಂಡಿದ್ದಾರೆ.

ಸರ್ಕಾರ ಅತಿಥಿ ಉಪನ್ಯಾಸಕರ ಆಗ್ರಹಗಳನ್ನು ಪರಿಗಣಿಸಿದ್ದು, ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಉಪನ್ಯಾಸಕರ ಗೌರವಧನದಲ್ಲಿ ಶೇ 100ರಷ್ಟು ಹೆಚ್ಚಳವೂ ಸೇರಿದೆ. ಅರ್ಹ ಅತಿಥಿ ಉಪನ್ಯಾಸಕರ ಸಂಬಳ ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ. 11ರಿಂದ ರೂ.13 ಸಾವಿರ ಸಂಬಂಳ ಪಡೆಯುತ್ತಿದ್ದ ಅತಿಥಿ ಉಪನ್ಯಾಸಕರು ಇನ್ನು ಮುಂದೆ ರೂ.32 ಸಾವಿರದವರೆಗೆ ಪಡೆಯಲಿದ್ದಾರೆ. ಇನ್ನೂ ಸಮಾಧಾನವಾಗಲಿಲ್ಲ ಎಂದರೆ ಹೇಗೆ?

ನೇರ ನೇಮಕಾತಿಯಾದ ಉಪನ್ಯಾಸಕರಿಗೆ ಮಾತ್ರ ಸೇವಾ ಭದ್ರತೆ ಇರಲಿದೆ. 8 ಗಂಟೆ ಮಾತ್ರ ಪಾಠ ಮಾಡುತ್ತಿದ್ದ ಉಪನ್ಯಾಸಕರಿಗೆ ಇನ್ನಷ್ಟು ಪಾಠಕ್ಕೆ ಅವಕಾಶ ಮಾಡಿಕೊಡುತ್ತಿದ್ದೇವೆ. 13 ಸಾವಿರ ಅತಿಥಿ ಉಪನ್ಯಾಸಕರಲ್ಲಿ ಕೇವಲ ನಾಲ್ಕೂವರೆ ಸಾವಿರ ಮಂದಿ ಮಾತ್ರ ಯುಜಿಸಿ ಪ್ರಕಾರ ಅರ್ಹತೆ ಹೊಂದಿದ್ದಾರೆ. 9 ಸಾವಿರ ಮಂದಿ ಅರ್ಹತೆ ಇರುವವರು ಮತ್ತು 5 ಸಾವಿರ ಮಂದಿ ಅರ್ಹತೆ ಇಲ್ಲವದರು ಕೂಡ ನೇಮಕ ಆಗಲಿದ್ದಾರೆಂದು ಹೇಳಿದರು.

ಕೆಲಸ ಮಾಡುವವರ ಅವರ ಬದುಕು ಉತ್ತಮವಾಗಿರಬೇಕು ಎಂದು ವೇತನ ಹೆಚ್ಚಳ ಮಾಡಿದ್ದೇವೆ. ಎಲ್ಲರಿಗೂ ಹೆಚ್ಚು ಕೆಲಸ ನೀಡಲು ಸಾಧ್ಯವಿಲ್ಲ. ಮುಖ್ಯ ಕಾರ್ಯದರ್ಶಿಗಿಂತ ಹೆಚ್ಚು ಸಂಬಂಳ ನೀಡುವುದು ಉತ್ತಮ ಗುಣಮಟ್ಟದ ಶಿಕ್ಷಕರು ಬರಬೇಕು ಎಂಬ ಕಾರಣಕ್ಕೆ, ಕಾಲಕಾಲಕ್ಕೆ ಉಪನ್ಯಾಸಕರ ನೇಮಕಾತಿ ನಡೆಯದಿರುವ ಕಾರಣಕ್ಕೆ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರ ಸೇವೆ ಪಡೆಯಲಾಗುತ್ತದೆ. ಆದರೂ ಉತ್ತಮ ಸಂಬಂಳ ನೀಡಿದ್ದೇವೆ ಎಂದು ತಿಳಿಸಿದರು.

Latest Indian news

Popular Stories