ಬೀದರಿನಲ್ಲಿ ಶಿರವಸ್ತ್ರ ಧರಿಸಿ ಬಂದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನೀಯರಿಗೆ ಪರೀಕ್ಷೆ ನಿರಾಕರಣೆ

ಬೀದರ್: ಬೀದರಿನಲ್ಲಿ ಶಿರವಸ್ತ್ರ ಧರಿಸಿ ಬಂದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನೀಯರಿಗೆ BRIMS ಕಾಲೇಜಿನಲ್ಲಿ ಪರೀಕ್ಷೆ ನಿರಾಕರಣೆ ಮಾಡಿದ ಕುರಿತು ವರದಿಯಾಗಿದೆ.

ವೀಡಿಯೋದಲ್ಲಿ ಪ್ರಾಧ್ಯಪಕರೊಬ್ಬರು ವಿದ್ಯಾರ್ಥಿನೀಯರಿಗೆ ಪರೀಕ್ಷೆ ನಿರಾಕರಿಸುತ್ತಿರುವುದು ಕಂಡು ಬಂದಿದ್ದು ಇದೀಗ ಈ ವೀಡಿಯೋ ಎಲ್ಲೆಡೆ ವೈರಲಾಗಿದೆ.

ಕರ್ನಾಟಕ ಉಚ್ಚ ನ್ಯಾಯಾಲಯ ಮೌಖಿಕವಾಗಿ ಶಿರವಸ್ತ್ರ ವಿವಾದದ ವಿಚಾರಣೆ ಮುಗಿಯವರೆಗೂ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ವಸ್ತ್ರ ಧರಿಸಿ ಕಾಲೇಜಿಗೆ ಹೋಗಬಾರದೆಂದು ಸೂಚಿಸಿದ ನಂತರ ಇದೀಗ ಬೀದತಿನಲ್ಲಿ ಈ ಘಟನೆ ವರದಿಯಾಗಿದೆ. ಹೈಕೋರ್ಟ್ ನಲ್ಲಿ ಈ ಕುರಿತು ಸೋಮವಾರ ಮುಂದಿನ ವಿಚಾರಣೆ ನಡೆಯಲಿದೆ.

Latest Indian news

Popular Stories