ಬೀದರ್: ಬಸವಣ್ಣನವರ ಕರ್ಮಭೂಮಿಯಲ್ಲಿ ಈದ್ ಮತ್ತು ಬಸವ ಜಯಂತಿಯನ್ನು ಒಗ್ಗೂಡಿ ಆಚರಿಸಿದ ಹಿಂದೂ-ಮುಸ್ಲಿಂ ಬಾಂಧವರು

ಬೀದರ್: ಬಸವಣ್ಣನವರ ಕರ್ಮಭೂಮಿಯಾದ ಬೀದರ್ ಮತ್ತೆ ಸಾಮರಸ್ಯದ ಅಭೂತಪೂರ್ವ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.

ಹಿಂದು ಮತ್ತು ಮುಸ್ಲಿಮರು ಬಸವೇಶ್ವರ ಜಯಂತಿ ಮತ್ತು ಈದುಲ್ ಫಿತ್ರ್’ನ್ನು ಜೊತೆಯಾಗಿ ಆಚರಿಸಿ ರಾಜ್ಯಕ್ಕೆ ಸಾಮರಸ್ಯದ ಸಂದೇಶ ರವಾನಿಸಿದ್ದಾರೆ. ಪರಸ್ಪರ ಹಸ್ತಲಾಘವ ಮಾಡಿ ಸಿಹಿ ತಿಂಡಿ,ನೀರು ಹಂಚಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಹಿನ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಅಬ್ದುಲ್ ಕಾದೀರ್, ಈದುಲ್ ಫಿತ್ರ್ ಒಂದು ಮಾನವ ಹಕ್ಕುಗಳಿಗೆ ಪ್ರಾಧಾನ್ಯತೆ ನೀಡುವ ಹಬ್ಬ. ಈ ಸಂದರ್ಭದಲ್ಲಿ ದಾನ ಧರ್ಮಗಳ ಮೂಲಕ ದೀನ ದಲಿತರ ಅವಶ್ಯಕತೆಗನ್ನು ಪೂರೈಸಲಾಗುತ್ತದೆ. ಬಸವಣ್ಣ ಈ ಸಮಾಜದ ದೊಡ್ಡ ಸಮಾಜ ಸುಧಾರಕ. ಈ ಎರಡು ಹಬ್ಬವನ್ನು ಎಲ್ಲರೂ ಸೇರಿ ಸಂಭ್ರಮದಿಂದ ಆಚರಿಸಬೇಕಾಗಿದೆ. ಇದರ ಅವಶ್ಯಕತೆ ಈ ಮುಂಚೆಗಿಂತ ಈಗ ಹೆಚ್ಚಿದೆ” ಎಂದರು.

Latest Indian news

Popular Stories