ಬೆಂಗಳೂರು ಉತ್ತರ ವಿವಿ ಉಪ ಕುಲಪತಿಗಳಾಗಿ ಪ್ರೊ. ನಿರಂಜನ ವಾನಳ್ಳಿ ನೇಮಕ

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ತಿಂಗಳುಗಳ ಕಾಯುವಿಕೆ ಬಳಿಕ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲ (Bengaluru North University)ಯಕ್ಕೆ ಹೊಸ ಉಪಕುಲಪತಿ ನೇಮಕವಾಗಿದ್ದು, ಪ್ರೊ. ನಿರಂಜನ ವಾನಳ್ಳಿ (Prof Niranjan Vanalli) ಅವರನ್ನು ನೇಮಕ ಬೆಂಗಳೂರು ಉತ್ತರ ವಿವಿ ವೈಸ್ ಚಾನ್ಸಲರ್ ಆಗಿ ನೇಮಕ ಮಾಡಲಾಗಿದೆ.

ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಪ್ರೊ.ನಿರಂಜನ ವಾನಳ್ಳಿ ಅವರನ್ನು ಉಪಕುಲಪತಿಗಳಾಗಿ ನೇಮಕ ಮಾಡಲಾಗಿದೆ. ಬೆಂಗಳೂರು ವಿಶ್ವವಿದ್ಯಾನಿಲಯದ ತ್ರಿವಿಭಜನೆಯ ನಂತರ BNU (Bengaluru North University) ಅನ್ನು ಸ್ಥಾಪಿಸಲಾಯಿತು. ತ್ರಿವಿಭಾಗದ ಮೂರನೇ ವಿಭಾಗವು ಬೆಂಗಳೂರು ನಗರ ವಿಶ್ವವಿದ್ಯಾಲಯವಾಗಿದೆ.

ಮೊದಲ ಉಪಕುಲಪತಿ ಟಿಡಿ ಕೆಂಪರಾಜು ಅವರು 2017 ರಲ್ಲಿ ತಮ್ಮ ಅಧಿಕಾರಾವಧಿಯನ್ನು ಪ್ರಾರಂಭಿಸಿದರು ಮತ್ತು ಅವರ ಅಧಿಕಾರಾವಧಿ ಜುಲೈ 2021 ರಲ್ಲಿ ಕೊನೆಗೊಂಡಿತ್ತು. ಬಳಿಕ ಈ ವರೆಗೂ ಬೆಂಗಳೂರು ಉತ್ತರ ವಿವಿಗೆ ಹೊಸ ಉಪ ಕುಲಪತಿಗಳ ನೇಮಕವಾಗಿರಲಿಲ್ಲ. ಹೊಸ ಉಪಕುಲಪತಿಯ ಹುಡುಕಾಟವು ವಿವಾದದಲ್ಲಿ ಮುಳುಗಿತ್ತು, ಏಕೆಂದರೆ ನೇಮಕಾತಿಯು ಸಮಯ ತೆಗೆದುಕೊಳ್ಳುತ್ತಿತ್ತು. ಅಲ್ಲದೆ BNU ನಲ್ಲಿ VC ಹುದ್ದೆಯ ಆಯ್ಕೆಯಲ್ಲಿ ದಲ್ಲಾಳಿಗಳು ಮಧ್ಯವರ್ತಿಗಳ ಕೈವಾಡದ ಕುರಿತು ಕೂಡ ಈ ಹಿಂದೆ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದವು. ಅಂತೆಯೇ ದಲ್ಲಾಳಿಯಿಂದ ಭರವಸೆ ನೀಡಲ್ಪಟ್ಟ ಒಬ್ಬ ಉಪನ್ಯಾಸಕನ ಆತ್ಮಹತ್ಯೆ ಇಡೀ ನೇಮಕಾತಿ ಪ್ರಕ್ರಿಯೆಯನ್ನು ವಿಳಂಬ ಮಾಡಿತ್ತು.

ಇದೀಗ ಈ ಎಲ್ಲ ವಿವಾದಗಳಿಗೆ ತೆರೆ ಬಿದ್ದಿದ್ದು, ಪ್ರೊ. ನಿರಂಜನ ವಾನಳ್ಳಿ ಅವರನ್ನು ಬೆಂಗಳೂರು ಉತ್ತರ ವಿವಿ ವೈಸ್ ಚಾನ್ಸಲರ್ ಆಗಿ ನೇಮಕ ಮಾಡಲಾಗಿದೆ. ಇನ್ನು ಹಿರಿಯ ಡೀನ್ ಮತ್ತು ಅರ್ಥಶಾಸ್ತ್ರದ ಪ್ರಾಧ್ಯಾಪಕಿ ಡಿ ಕುಮುದಾ ಅವರನ್ನು ಹಂಗಾಮಿ ಉಪಕುಲಪತಿಯನ್ನಾಗಿ ಮಾಡಲಾಗಿದೆ.

ನಿರಂಜನ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರು ಮತ್ತು ಅಧ್ಯಕ್ಷರಾಗಿದ್ದು, ಡಿಸೆಂಬರ್ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಈ ಬಗ್ಗೆ ತಮ್ಮ ಸಂತಸ ಹಂಚಿಕೊಂಡಿರುವ ಪ್ರೊ.ವಾನಳ್ಳಿ ಅವರು, ‘ಪೂರ್ಣ ಸಮಯದ ಉಪಕುಲಪತಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ಪತ್ರಿಕೋದ್ಯಮ ಅಧ್ಯಾಪಕರು ಎಂಬುದಕ್ಕೆ ಸಂತಸವಾಗುತ್ತಿದೆ. ಅಂತೆಯೇ ಶಿಕ್ಷಣತಜ್ಞರಾಗಿ 30 ವರ್ಷಗಳ ಸೇವೆಸಲ್ಲಿಸಿದ್ದು, ವಿಶ್ವವಿದ್ಯಾನಿಲಯವನ್ನು ನಿರ್ಮಿಸುವ ಅವಕಾಶ ಮತ್ತು ಸವಾಲನ್ನು ಅವರು ಸ್ವಾಗತಿಸುತ್ತೇನೆ. ಅರ್ಹತೆಯ ಆಧಾರದ ಮೇಲೆ ಈ ಹುದ್ದೆಯನ್ನು ಅವರಿಗೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

Latest Indian news

Popular Stories