ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ 3 ಮಕ್ಕಳ ಸಂಶಯಾಸ್ಪದ ಮೃತ್ಯು; ವರದಿ ಕೇಳಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್

ಬೆಳಗಾವಿ: ಜಿಲ್ಲಾಸ್ಪತ್ರೆ ಬಿಮ್ಸ್​ನಲ್ಲಿ ಮೂರು ಮಕ್ಕಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. 13 ತಿಂಗಳ ಮಗು ಪವಿತ್ರಾ ಹುಲಗುರ್, 14 ತಿಂಗಳ ಮಗು ಮಧು ಉಮೇಶ್ ಕುರಗುಂದಿ ಮತ್ತು ಒಂದೂವರೆ ವರ್ಷದ ಚೇತನ ಪೂಜಾರಿ ಮೃತಪಟ್ಟ ಹಸುಗೂಸುಗಳು. ಮೂರು ದಿನಗಳ ಹಿಂದೆ ಚಿಕಿತ್ಸೆಗಾಗಿ ಈ ಮಕ್ಕಳನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇದೀಗ ಮೃತಪಟ್ಟಿವೆ.

ಸಾವಿಗೆ ಕಾರಣ ಇನ್ನು ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ಆರಂಭವಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕಾರಣ ಹೊರ ಬೀಳಲಿದೆ. ಮಕ್ಕಳ ಸಾವಿನ ಬಗ್ಗೆ ಕುಲಗೋಡ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಿನ್ನೆ ಒಂದು ಮಗು ಮೃತಪಟ್ಟಿತ್ತು. ಇಂದು ಮತ್ತೆ ಎರಡು ಮಗು ಸಾವನ್ನಪ್ಪಿವೆ. ಬಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಸದ್ಯ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಜ.12ರಂದು ಆರೋಗ್ಯ ಇಲಾಖೆ ಸಿಬ್ಬಂದಿ ರುಬೆಲ್ಲಾ ಲಸಿಕೆ ನೀಡಿದ್ದರು. ಇಂಜೆಕ್ಷನ್ ಪಡೆದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೂಡಲೇ ನಾವು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಬೇಜವಾಬ್ದಾರಿಯಿಂದ ಮಕ್ಕಳು ಸಾವನ್ನಪ್ಪಿವೆ ಅಂತ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಘಟನೆ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿ ಶಶಿಕಂತ ಮುನ್ಯಾಳ ವರದಿ ಸಲ್ಲಿಸುವಂತೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಜನವರಿ 12 ರಂದು ಜಿಲ್ಲೆಯಲ್ಲಿ ರುಬೆಲಾ ಹಾಗೂ ಕೋವಿಡ್ -19 ಗೆ ಲಸಿಕೆ ನೀಡಲಾಗುತಿತ್ತು.ಲಸಿಕೆಗಳನ್ನು ನರ್ಸ್ ಒಬ್ಬರು ನೀಡುತ್ತಿದ್ದರು. ಆ ಸಂದರ್ಭದಲ್ಲಿ ಎಡವಟ್ಟು ಆಗಿರಬಹುದೆಂದು ಶಂಕಿಸಲಾಗಿದೆ.

ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಪ್ರಾಥಮಿಕ ತನಿಖೆಯಲ್ಲಿ ಲಸಿಕೆ ಅಡ್ಡ ಪರಿಣಾಮದಿಂದ ಘಟನೆ ಆಗಿರುವುದಾಗಿ ತಿಳಿದುಬಂದಿದೆ. ಲಸಿಕೆ ತೆಗೆದುಕೊಂಡ ಬಳಿಕ ನಾಲ್ವರು ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗಿದೆ. 21 ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, 17 ಮಕ್ಕಳು ಚೆನ್ನಾಗಿದ್ದಾರೆ. ಒಂದು ಮಕ್ಕಳು ಚೇತರಿಸಿಕೊಳ್ಳುತ್ತಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

Latest Indian news

Popular Stories