ಮಲ್ಪೆ- ಪಡುಕೆರೆ ಸೇತುವೆಯಲ್ಲಿ ಬೈಕ್ ಪತ್ತೆ – ಯುವಕ ನಾಪತ್ತೆ

ಮಲ್ಪೆ: ಮಲ್ಪೆ-ಪಡುಕೆರೆ ಸೇತುವೆಯ ಮೇಲೆ ಬೈಕೊಂದು ಪತ್ತೆಯಾಗಿದ್ದು ಅದರಲ್ಲಿದ್ದ ಸವಾರ ನಾಪತ್ತೆಯಾಗಿರುವ ಕುರಿತು ವರದಿಯಾಗಿದೆ.

ನಾಪತ್ತೆಯಾದ ಶಿವಪ್ಪ ನಾಯ್ಕ ( 25) ಇವರು 6 ತಿಂಗಳ ಹಿಂದೆ  ದಾವಣಗೆರೆಯ ಉತ್ಕಟ್ಟಿ ತಾಂಡದ ಆಶಾ ಇವರನ್ನು ಪ್ರೀತಿಸಿ ಮದುವೆ ಆಗಿದ್ದು , ಮದುವೆಯ ನಂತರ  ಹೆಂಡತಿ ಆಶಾರೊಂದಿಗೆ  ಮಲ್ಪೆ ಕೊಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ಕಳೆದ 15 ದಿನಗಳಿಂದ ಮಲ್ಪೆ  ಮೀನು ಪಾರ್ಟಿಯೊಂದರಲ್ಲಿ  ಬಾಕ್ಸ್ ಹೊರುವ ಕೆಲಸ ಮಾಡಿಕೊಂಡಿದ್ದು, ಕೆಲವು ದಿನಗಳಿಂದ ಹೆಂಡತಿಯೊಂದಿಗೆ ವೈಮನಸ್ಸು ಹೊಂದಿರುವ ಕುರಿತು ತಿಳಿದು ಬಂದಿದೆ.

ಸೆ. 23 ರಂದು  ಶಿವಪ್ಪ ನಾಯ್ಕ ನ  ಬೈಕ್  ಮಲ್ಪೆ ಪಡುಕೆರೆ ಬ್ರಿಡ್ಜ್  ಮೇಲೆ ಎಡಭಾಗದ ತಡೆಗೋಡೆಯ ಬಳಿ ಬಿದ್ದಿದೆ. ದ್ವಿಚಕ್ರ ವಾಹನದ ಎಡಬದಿಯ ಡೂಮ್ ಲೈಟ್,ಇಂಡಿಕೇಟರ್ , ಎಡಭಾಗದ ಕ್ಲಚ್ ಲಿವರ್  ಎಡಭಾಗದ ತಡೆಗೋಡೆಗೆ ಡಿಕ್ಕಿಯಾಗಿ ಮುರಿದು ಅಲ್ಲಿಯೇ ಬಿದಿದ್ದವು.ಬೈಕಿನ ಕೀ ಬೈಕಿನಲ್ಲಿ ಆನ್ ಕಂಡೀಷನಲ್ಲಿ ಇತ್ತು ಎನ್ನಲಾಗಿದೆ.   ಶಿವಪ್ಪನಾಯ್ಕನ ಬಲಕಾಲಿನ ಚಪ್ಪಲಿ ಅಲ್ಲಿಯೇ ಬಿದಿತ್ತು. ದ್ವಿ ಚಕ್ರವಾಹನ ಗುದ್ದಿ ದ ಪಿಲ್ಲರ್ ನ ಕೆಳಗಿನ ಮತ್ತು ಮೇಲಿನ ಭಾಗದಲ್ಲಿ ಕೆಂಪು ಬಣ್ಣದ ದ್ರವ ಪದಾರ್ಥ ಕೂಡಾ ಇತ್ತು. ರಾತ್ರಿ ಬಂದಿರುವ ಮಳೆಯಿಂದ ದ್ವಿಚಕ್ರ ವಾಹನ ಸಂಪೂರ್ಣ ನೆನೆದಿತ್ತು. ಬೈಕಿನ ಹಿಂಭಾಗದ ಬ್ಯಾಗ್ ನಲ್ಲಿ ಶಿವಪ್ಪ ನಾಯ್ಕನ ಮೊಬೈಲ್ ಇತ್ತೆಂದು ವರದಿಯಾಗಿದೆ.

ಶಿವಪ್ಪ ನಾಯ್ಕ್ ರಾತ್ರಿ 11:30 ಗಂಟೆಗೆ ಎ.ಎ ಎಫ್ ನಲ್ಲಿ ಕೆಲಸ ಮುಗಿಸಿ ಬೈಕಿನಲ್ಲಿ ಮನೆಗೆ ಹೋದವನು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಆತನ ಹೆಂಡತಿ ಆಶಾಳನ್ನು ಕರೆದುಕೊಂಡು ಹೋಗಿ ಪಾರಿಯ ಮನೆಯಲ್ಲಿ ಬಿಟ್ಟು ನನಗೆ ಯಾವುದೋ ಮೀನಿನ ಕೆಲಸ ಬಂದಿದೆ ನಾನು ಹೋಗುತ್ತಿದ್ದೇನೆ.ಆಶಾ ನಿನ್ನ ಮನೆಯಲ್ಲಿಯೇ ಇರಲಿ ಎಂದು ಹೇಳಿ ಹೊರಗಿನಿಂದಲೇ ಬೈಕ್   ತೆಗೆದುಕೊಂಡು ಹೋಗಿದ್ದನು  ಎಂದು ತಿಳಿಸಿರುತ್ತಾಳೆ.   

ಮಧ್ಯಾವಧಿಯಲ್ಲಿ  ಮಲ್ಪೆ ಪಡುಕೆರೆ ಬ್ರಿಡ್ಜ್ ಮೇಲೆ ಬೈಕ್ ಅಪಘಾತವಾಗಿ ಅಥವಾ ಇನ್ಯಾವುದೋ ಕಾರಣಗಳಿಂದ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 81/2022  ಕಲಂ: ಗಂಡಸು ಕಾಣೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.  

Latest Indian news

Popular Stories