ಮುರಾರ್ಜಿ ದೇಸಾಯಿ ವಸತಿ ಶಾಲೆ ವಿಷಯ ತಾಲೂಕು ಆಡಳಿತ ಸಭೆಯಲ್ಲಿ ಚರ್ಚೆ : ಎಸ್ ಐ ಓ

ಈ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿವರೆಗೆ 280 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ರಜೆ ನೀಡಿ 9ಮತ್ತು 10ನೇ ತರಗತಿಯ 100 ವಿದ್ಯಾರ್ಥಿಗಳನ್ನು ಸಿಂಧನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ಥಳಾಂತರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೋವಿಡ್ ಮೊದಲು ಮತ್ತು ಎರಡನೇ ಬಾರಿಗೆ ವ್ಯಾಪಿಸಿದ್ದ ಸಂದರ್ಭದಲ್ಲಿ ಲಾಕ್‌ಡೌನ್ ಜಾರಿಯಲ್ಲಿತ್ತು. ಆಗ ಈ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕೋವಿಡ್ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಲಾಗಿತ್ತು. ಆದರೆ ಈ ಬಾರಿ ಸರ್ಕಾರ ಇನ್ನೂ ಲಾಕ್ ಡೌನ್ ಜಾರಿಗೊಳಿಸಿಲ್ಲ. ಶಾಲೆಯಲ್ಲಿ ತರಗತಿಗಳು ನಡೆಯುತ್ತಿವೆ. ಈಗ ಏಕಾಏಕಿ ಶಾಲೆ ಬಂದ್ ಮಾಡಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಉಂಟು ಮಾಡುವುದು ಸರಿಯಲ ಎಂದು ತಿಳಿಸಿದ್ದಾರೆ.

ಮುರಾರ್ಜಿ ವಸತಿ ಶಾಲೆಯನ್ನು ಕೋವಿಡ್ ಸೆಂಟರನ್ನಾಗಿ ಮಾಡುತ್ತಿರುವ ಆಡಳಿತದ ನಿರ್ಧಾರವನ್ನು ವಿರೋಧಿಸಿ ನಗರದ ಕಚೇರಿಯಲ್ಲಿ ನಡೆದ ತಾಲೂಕು ಆಡಳಿತ ಸಭೆಯಲ್ಲಿ ವಿಷಯ ಚರ್ಚೆಗೆ ತರಲಾಯಿತು.
ವಿದ್ಯಾರ್ಥಿಗಳು ಸಮಸ್ಯೆಯನ್ನು ಆಲಿಸಿದ ಶಾಸಕರು ಸೂಕ್ತ ಕ್ರಮ ಕೈಗೊಳ್ಳಲಾಗುವುದಾಗಿ ಆಶ್ವಾಸನೆಯನ್ನು ನೀಡಿರುತ್ತಾರೆ.ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿ ಸಂಘಟನೆಗಳು ಸೇರಿಕೊಂಡು ಹೋರಾಟ ಮಾಡುವುದಾಗಿ SIO ತಾಲೂಕು ಘಟಕ ಅಧ್ಯಕ್ಷ ಸಮೀರ್ ಪಾಷಾ ಹೇಳಿಕೆ.

ಈ ಸಂದರ್ಭದಲ್ಲಿ ಮಾತನಾಡಿದ BVS ಮುಖಂಡರಾದ ದತ್ತಾತ್ರೇಯ ವಕೀಲರು ಶಾಲೆ ವಿದ್ಯಾರ್ಥಗಳ ಶಿಕ್ಷಣ ಮತ್ತು ಆರೋಗ್ಯ ಹಿತ ದೃಷ್ಟಿಯಿಂದ ನಗರದ ಪರಿಯಾಯ ಸ್ಥಳಗಳಲ್ಲಿ ಕೋವಿಡ್ ಸೆಂಟರನ್ನು ಸ್ಥಾಪಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕ ಘಟಕ ಅಧ್ಯಕ್ಷ ಸಮೀರ್ ಪಾಷಾ, ಅಬ್ದುಲ್ ಅಜೀಜ್, ಜುಬೇರ್ ಖಾನ್, ಎಸ್ ಎಂ ಅಶ್ಫಾಕ್, BVS ಮುಖಂಡರಾದ ದತ್ತಾತ್ರೇಯ ಇತರರು ಉಪಸ್ಥಿತರಿದ್ದರು.

Latest Indian news

Popular Stories