ಮೇಕೆದಾಟು ಕುರಿತು ಯೋಜನೆ ಕುರಿತು ಮೇಧಾ ಪಾಟ್ಕರ್, ನಟ ಚೇತನ್ ಗೆ ಮನವರಿಕೆ: ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್

ಮೈಸೂರು: ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತ ಪಡಿಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರಿಗೆ ಯೋಜನೆ ಸಂಬಂಧ ಮನವರಿಕೆ ಮಾಡಿಕೊಡುವುದಾಗಿ ಇನ್ಸ್ ಸ್ಟಿಟ್ಯೂಟ್ ಆಫ್ ಎಂಜಿನೀಯರ್ ಕರ್ನಾಟಕ ಕೇಂದ್ರದ ಅಧ್ಯಕ್ಷ ಎಂ ಲಕ್ಷ್ಮಣ್ ಹೇಳಿದ್ದಾರೆ.

4,716 ಎಕರೆ ಅರಣ್ಯ ಭೂಮಿ ಮತ್ತು 280 ಎಕರೆ ಕಂದಾಯ ಭೂಮಿ ಸೇರಿದಂತೆ ಅಂದಾಜು 5,088 ಪ್ರದೇಶಗಳು ಮುಳುಗಡೆಯಾಗುವುದರಿಂದ ಯೋಜನೆಯು ಪರಿಸರದ ಮೇಲೆ ಕನಿಷ್ಠ ಪರಿಣಾಮ ಬೀರುತ್ತದೆ ಎಂದು ಮನವರಿಕೆ ಮಾಡಲು ಇಂಜಿನಿಯರ್ಸ್ ಸಂಸ್ಥೆಯು ಮುಂದಾಗಿದೆ ಎಂದು ತಿಳಿಸಿದ್ದಾರೆ.

ಸಂವಾದದಲ್ಲಿ ಮಾತನಾಡಿದ ಲಕ್ಷ್ಮಣ್, 200 ಕುಟುಂಬಗಳಿರುವ ನಾಲ್ಕು ಗ್ರಾಮಗಳು ಮಾತ್ರ ಮುಳುಗಡೆಯಾಗಲಿದ್ದು, ಅವರು ಸ್ಥಳಾಂತರಕ್ಕೆ ಒಪ್ಪಿಗೆ ನೀಡಿದ್ದಾರೆ. ಬುಡಕಟ್ಟು ಜನಾಂಗದವರಿಗೆ ತೊಂದರೆಯಾಗಲಿದೆ ಎಂದು ಹೇಳುವ ಮೂಲಕ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ನಟ ಚೇತನ್ ಅವರನ್ನೂ ಯೋಜನಾ ಸ್ಥಳಕ್ಕೆ ಆಹ್ವಾನಿಸಲಾಗುವುದು ಎಂದು ಅವರು ಹೇಳಿದರು.

ಉದ್ದೇಶಿತ ಪ್ರದೇಶಗಳಲ್ಲಿ ಯಾವುದೇ ಬುಡಕಟ್ಟು ಜನಾಂಗದವರು ಇಲ್ಲ , ಅಣೆಕಟ್ಟಿನ ನಿರ್ಮಾಣವು 50-60 ಕಿಮೀ ಅಂತರ್ಜಲವನ್ನು ಮರುಪೂರಣಗೊಳಿಸುತ್ತದೆ ಮತ್ತು ಅರಣ್ಯ ಪ್ರದೇಶವನ್ನು ಇನ್ನಷ್ಟು ಸುಧಾರಿಸುತ್ತದೆ ಎಂದು ಅವರು ಹೇಳಿದರು.

ನಾವು ಯೋಜನೆಯ ಬಗ್ಗೆ ಕರ್ನಾಟಕದ ಸಂಸದರಿಗೆ ವಾಸ್ತವ ವಿವರ ನೀಡಲಿದ್ದೇವೆ ಈ ನಿಟ್ಟಿನಲ್ಲಿ ಪ್ರತಾಪ್ ಸಿಂಹ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತೇವೆ” ಎಂದು ಅವರು ಹೇಳಿದರು.

ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ ನೀರು ಸಿಗುವುದಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದ ಲಕ್ಷ್ಮಣ್, 20,000 ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳು, ಶೇಕಡಾ 30 ರಷ್ಟು ಕಾವೇರಿ ನೀರಿನಿಂದ ವಂಚಿತವಾಗಿರುವೆ, ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು ರಾಜ್ಯ ಸರ್ಕಾರ 9,000 ಕೋಟಿ ರೂ. ವೆಚ್ಚ ಮಾಡುತ್ತಿದೆ ಎಂದು ಹೇಳಿದ್ದಾರೆ.

ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುವುದರಲ್ಲಿ ಯಾವುದೇ ತರ್ಕವಿಲ್ಲ ಎಂದು ಪ್ರತಿಪಾದಿಸಿದ ಅವರು, ಕರ್ನಾಟಕದ ರಾಜಕೀಯ ಪಕ್ಷಗಳು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೇಂದ್ರದಿಂದ ಅನುಮೋದನೆ ಪಡೆಯಲು ಒಗ್ಗಟ್ಟಾಗಿ ಬರಬೇಕು ಎಂದು ಹೇಳಿದರು.

Latest Indian news

Popular Stories