ವಿದ್ಯಾರ್ಥಿಯನ್ನು ತರಗತಿಯಲ್ಲಿ “ಭಯೋತ್ಪಾದಕ” ಎಂದ ಪ್ರಾಧ್ಯಾಪಕರು – ಘಟನೆಯನ್ನು ಖಂಡಿಸಿದ ಅಮೃತ್ ಶೆಣೈ

ಉಡುಪಿ: ಸಾಮಾಜಿಕ ಜಾಲಾತಾಣದಲ್ಲಿ ವೀಡಿಯೋ ವೊಂದು ವೈರಲಾಗಿದ್ದು ವೀಡಿಯೋ ದಲ್ಲಿ ಉಡುಪಿಯ ಪ್ರತಿಷ್ಠಿತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ವಿದ್ಯಾರ್ಥಿಗೆ “ಭಯೋತ್ಪಾದಕ” ಎಂದು ಉಲ್ಲೇಖಿಸಿರುವುದನ್ನು ವಿದ್ಯಾರ್ಥಿ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದ. ಇದೀಗ ಈ ಘಟನೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡರಾದ ಅಮೃತ್ ಶೆಣೈ ಖಂಡಿಸಿದ್ದಾರೆ.

“ಟ್ವೀಟರ್ ನಲ್ಲಿ ಪ್ರಾಧ್ಯಾಪಕರು ಭಯೋತ್ಪಾದಕ ಎಂದು ಉಲ್ಲೇಖಿಸಿದಕ್ಕೆ ವಿದ್ಯಾರ್ಥಿಯು ಆಕ್ಷೇಪ ವ್ಯಕ್ತಪಡಿಸಿದ ವೀಡಿಯೋ ವೈರಲಾಗಿದ್ದು ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ದೇಶದ ಭವಿಷ್ಯವನ್ನು ರೂಪಿಸಬೇಕಾಗಿರುವ ಪ್ರಾಧ್ಯಾಪಕರ ವರ್ತನೆ ಇದಾಗಿರಬಾರದು. ಈ ದೇಶದಲ್ಲಿ ವ್ಯವಸ್ಥಿತವಾಗಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ. ಮುಸಲ್ಮಾನರನ್ನು ಭಯೋತ್ಪಾದಕರಂತೆ ಬಿಂಬಿಸುವ ಅಭಿಯಾನ ನಡೆಸಲಾಗುತ್ತದೆ. ಬಿಜೆಪಿ ರಾಜಕೀಯ ಲಾಭಕ್ಕಾಗಿ ಈ ರೀತಿಯ ಮನಸ್ಥಿತಿಯನ್ನು ನಿರ್ಮಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವೆಲ್ಲರೂ ಜಾತಿ-ಮತ-ಧರ್ಮದ ಭೇದ ಮರೆತು ಒಂದಾಗಬೇಕು. ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಸುಧೃಡಗೊಳಿಸಬೇಕಾಗಿದೆ. ಈ ರೀತಿಯ ವರ್ತನೆ ತೋರಿರುವ ಪ್ರಾಧ್ಯಾಪಕರ ವಿರುದ್ಧ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಸರಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Latest Indian news

Popular Stories