ಶಾಲೆಯಲ್ಲಿ ಕೋವಿಡ್ ಸೋಂಕು ಕಂಡು ಬಂದರೆ ಕ್ಲೋಸ್ ಮಾಡಿ -ಸಚಿವ ಡಾ. ಸುಧಾಕರ್

ಬೆಂಗಳೂರು: ಶಾಲೆಗಳಲ್ಲಿ ಕೊರೊನಾ ಸೋಂಕು ಕಂಡು ಬಂದರೆ ಶಾಲೆಯನ್ನು ಕ್ಲೋಸ್ ಮಾಡಬೇಕು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದರು.

ದಾಸರಹಳ್ಳಿಯಲ್ಲಿ ಎರಡು ಖಾಸಗಿ ಶಾಲೆಗಳಲ್ಲಿ ಸೋಂಕು ಕಂಡು ಬಂದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಾಲೆ ಕ್ಲೋಸ್ ಮಾಡಿ ಕೊರೊನಾ ನಿಯಮ ಪಾಲನೆ ಮಾಡಬೇಕು. ದಾಸರಹಳ್ಳಿಯ ಎರಡು ಖಾಸಗಿ ಶಾಲೆಗಳಲ್ಲಿ ಸೋಂಕು ಬಂದಿರುವ ಬಗ್ಗೆ ಮಾಹಿತಿ ಬಂದಿಲ್ಲ. ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಮಕ್ಕಳಿಗೆ ಸೋಂಕು ಬಂದ ಕೂಡಲೇ ಏನು ಆಗುವುದಿಲ್ಲ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಎಷ್ಟು ಲಸಿಕೆ ಆಗಿದೆ ಮಾಹಿತಿ ಪಡೆಯುತ್ತಿದ್ದೇವೆ. 15 ವರ್ಷ ಮೇಲ್ಪಟ್ಟರಿಗೂ ಲಸಿಕೆ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಸೋಂಕು ಬಂದ ಕೂಡಲೇ ಶಾಲೆ ಕ್ಲೋಸ್ ಮಾಡಬೇಕು. ಕೊರೊನಾ ಪ್ರೋಟೋಕಾಲ್‍ನಂತೆ ನಿಯಮ ಪಾಲನೆ ಮಾಡಬೇಕು ಎಂದು ತಿಳಿಸಿದರು.

Latest Indian news

Popular Stories