ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ, ವಿರೋಧ ಪಕ್ಷಗಳನ್ನು ಎದುರಿಸುವಂತೆ ಬಿಜೆಪಿ ಸಂಸದರಿಗೆ ಸೂಚನೆ

ನವದೆಹಲಿ: ಬಿಜೆಪಿ ಸಂಸದರ ಮತ್ತು ಪಕ್ಷದ ಹಿರಿಯ ನಾಯಕರ ಟ್ವೀಟ್‌ಗಳನ್ನು ಈಗ ಪ್ರಧಾನಿ ನರೇಂದ್ರ ಮೋದಿ ಅವರ ತಂಡ ಅತ್ಯಂತ ನಿಕಟವಾಗಿ ಮೌಲ್ಯಮಾಪನ ಮಾಡಿದೆ.

ಬಿಜೆಪಿ ಸಂಸದರು ಮತ್ತು ಇತರ ಹಿರಿಯ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗುವ ಮೂಲಕ ಸರ್ಕಾರದ ಕಾರ್ಯಗಳು ಮತ್ತು ಜನರಿಗಾಗಿ ಪಕ್ಷದ ನೀತಿಗಳನ್ನು ಹೈಲೈಟ್ ಮಾಡುವಂತೆ ಪದೇ ಪದೇ ಸೂಚಿಸಲಾಗುತ್ತಿದೆ.

ಮೈಕ್ರೋಬ್ಲಾಗಿಂಗ್ ಸೈಟ್‌ಗಳು ಸೇರಿದಂತೆ ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ವಿಶೇಷವಾಗಿ ಆಮ್ ಆದ್ಮಿ ಪಕ್ಷ(ಎಎಪಿ)ದ ವಿರೋಧದ ಪ್ರತಿ ಹೆಜ್ಜೆಯನ್ನು ಎದುರಿಸುವಂತೆ ಚುನಾವಣೆ ಎದುರಿಸಲಿರುವ ರಾಜ್ಯಗಳ ಸಂಸದರು ಸೇರಿದಂತೆ ಎಲ್ಲಾ ಸಂಸದರಿಗೆ ಪ್ರಧಾನಿ ಮೋದಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯಸಭೆ ಮತ್ತು ಲೋಕಸಭೆಯ ಸಂಸದರು ಸೇರಿದಂತೆ ಬಹುತೇಕ ಎಲ್ಲಾ ಬಿಜೆಪಿ ನಾಯಕರ ಚಟುವಟಿಕೆಗಳು ಮತ್ತು ಎಲ್ಲಾ ಹಿರಿಯ ಪದಾಧಿಕಾರಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಎಷ್ಟು ಸಕ್ರಿಯರಾಗಿದ್ದಾರೆ ಎಂಬುದನ್ನು ನಿರ್ಣಯಿಸಲು ಪ್ರಧಾನಿ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಬಿಜೆಪಿಯ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

“ಎಎಪಿ ಪಂಜಾಬ್‌ನಲ್ಲಿ ಸರ್ಕಾರವನ್ನು ರಚಿಸಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಆಪ್ ಪಂಜಾಬ್ ಮತ್ತು ದೆಹಲಿಯನ್ನು ಮೀರಿ ಇತರೆ ರಾಜ್ಯಗಳಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳುವುದನ್ನು ತಡೆಯಬೇಕು. ನಾವು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಅದ ತಪ್ಪು ನೀತಿಗಳು ಮತ್ತು ಆಡಳಿತವನ್ನು ಎತ್ತಿ ತೋರಿಸಬೇಕು” ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

Latest Indian news

Popular Stories