150ಕ್ಕೂ ಅಧಿಕ ಮಂದಿ ಬಿಜೆಪಿ,ಕಾಂಗ್ರೆಸ್‌ ಕಾರ್ಯಕರ್ತರು ಜೆಡಿಎಸ್‌ ಸೇರ್ಪಡೆ

ಗುಂಡ್ಲುಪೇಟೆ: ತಾಲೂಕಿನ ಲಕ್ಕೂರು ಗ್ರಾಮದಸುಮಾರು 150ಕ್ಕೂ ಅಧಿಕ ಮಂದಿ ಬಿಜೆಪಿ,ಕಾಂಗ್ರೆಸ್‌ ಕಾರ್ಯಕರ್ತರು ಜೆಡಿಎಸ್‌ ಅಭ್ಯರ್ಥಿ ಕಡಬೂರು ಮಂಜುನಾಥ್‌ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

ಈ ವೇಳೆ ಜೆಡಿಎಸ್‌ ಅಭ್ಯರ್ಥಿ ಕಡಬೂರು ಮಂಜುನಾಥ್‌ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಕಾರ್ಯ ಕ್ರಮಗಳಾದ ರೈತರು, ಜನ ಸಾಮಾನ್ಯರು, ಮಹಿಳಾ ಸಬಲೀಕರಣ, ನಿರುದ್ಯೋಗ ನಿರ್ಮೂಲನೆ ಸೇರಿದಂತೆ ಇನ್ನಿತರ ಜನಪರ ಚಿಂತನೆಗಳನ್ನುಮೆಚ್ಚಿ ಜೆಡಿಎಸ್‌ ಪಕ್ಷಕ್ಕೆ ಕ್ಷೇತ್ರದಲ್ಲಿ ಅಧಿಕಸಂಖ್ಯೆಯಲ್ಲಿ ಜನರು ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷ ಬಲಿಷ್ಠವಾಗಿದ್ದು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳಿಗೆ ಪ್ರಬಲವಾಗಿ ಪೈಪೋಟಿ ನೀಡಲಿದೆ. ಈ ಕಾರಣದಿಂದ ಕ್ಷೇತ್ರದಮತದಾರರು ಜೆಡಿಎಸ್‌ಗೆ ಹೆಚ್ಚಿನ ಬೆಂಬಲ ನೀಡಿಗೆಲುವಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಗ್ರಾಪಂ ಸದಸ್ಯರಾದ ಲಲಿತ ನಾಗರಾಜು, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ವನಜಾಕ್ಷಿ, ಶಿವಪ್ಪ ವೆಂಕಟೇಶ್‌,ಮಹೇಂದ್ರ, ರವಿ, ಚಂದ್ರು, ಸಂಪತ್ತು, ನಾಗೇಂದ್ರ, ಮಣಿ, ಗೋವಿಂದ, ಸತೀಶ್‌, ಆರಾಧ್ಯ ಚಿಣ್ಣಪ್ಪ, ದೊಡ್ಡಮಾದಾಪ್ಪ, ಮಹದೇವನಾಯ್ಕ, ಬಸವ ರಾಜು, ಸುನಿಲ್‌, ಜವರಶೆಟ್ಟಿ, ಮಾದಪ್ಪ, ಶಿವಯ್ಯ ಶೆಟ್ಟಿ, ಮಾದೇವ, ಚಿಕ್ಕಸ್ವಾಮಿ, ಮಂಜುನಾಥ್‌,ಸಿದ್ದಪ್ಪ ಸೇರಿದಂತೆ 150ಕ್ಕೂ ಹೆಚ್ಚು ಜೆಡಿಎಸ್‌ ಪಕ್ಷ ಸೇರ್ಪಡೆಯಾದರು.

Latest Indian news

Popular Stories