18 ವರ್ಷ ಪ್ರಾಯದಲ್ಲಿ ಪ್ರಧಾನಿಯನ್ನು ಆಯ್ಕೆ ಮಾಡಬಹುದಾದರೆ ಸಂಗಾತಿಯನ್ನು ಯಾಕೆ ಆಯ್ಕೆ ಮಾಡಬಾರದು – ಒವೈಸಿ

ನವದೆಹಲಿ: ಸರಕಾರ ಹುಡುಗಿಯರ ಮದುವೆ ವಯಸ್ಸನ್ನು ಹದಿನೆಂಟಕ್ಕೆ ಏರಿಸಲು ಕ್ಯಾಬಿನೆಟ್ ಅನುಮೋದನೆ ಪಡೆದಿದೆ. ಇದೀಗ ಈ ಕುರಿತು ಬಿಲ್ ಅಂಗೀಕಾರವಾಗಲು ಬಾಕಿ ಉಳಿದಿದೆ. ಈ ಮಧ್ಯೆ ಇದರ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಅಸಾವುದ್ದೀನ್ ಒವೈಸಿ, 18 ವರ್ಷ ಪ್ರಾಯದಲ್ಲಿ ಪ್ರಧಾನಿಯನ್ನು ಆಯ್ಕೆ ಮಾಡಬಹುದಾದರೆ ಸಂಗಾತಿಯನ್ನು ಯಾಕೆ ಆಯ್ಕೆ ಮಾಡಬಾರದೆಂದು ಪ್ರಶ್ನಿಸಿದ್ದಾರೆ.

“ಹದಿನೆಂಟು ವರ್ಷದಲ್ಲಿ ಹುಡುಗಿಯೊಬ್ಬಳು ಮತ ನೀಡಬಹುದಾದರೆ ಆಕೆ ಸಂಗಾತಿಯನ್ನು ಯಾಕೆ ಆಯ್ಕೆ ಮಾಡಬಾರದು. ನೀವು ಸರಕಾರವೋ ಅಥವಾ ಮೊಹಲ್ಲಾದ ಚಿಕ್ಕಪ್ಪನಾ? ಯಾರು ಯಾವಾಗ ‌ಮದುವೆಯಾಗಬೇಕು. ಯಾವಾಗ ಊಟ ಮಾಡಬೇಕೆಂದು ನಿರ್ಧರಿಸಲು” ಎಂದು ವ್ಯಂಗ್ಯವಾಡಿದ್ದಾರೆ.

ಮೋದಿ ಸರ್ಕಾರದ ಪಿತೃಪ್ರಭುತ್ವಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ಓವೈಸಿ ಹೇಳಿದ್ದಾರೆ. 18 ನೇ ವಯಸ್ಸಿನಲ್ಲಿ, ಒಬ್ಬ ಭಾರತೀಯ ನಾಗರಿಕನು ಒಪ್ಪಂದಗಳಿಗೆ ಸಹಿ ಮಾಡಬಹುದು. ವ್ಯವಹಾರವನ್ನು ಪ್ರಾರಂಭಿಸಬಹುದು, ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡಬಹುದು ಮತ್ತು ಸಂಸದರು ಮತ್ತು ಶಾಸಕರನ್ನು ಆಯ್ಕೆ ಮಾಡಬಹುದು. ಗಂಡುಮಕ್ಕಳ ಮದುವೆಯ ವಯಸ್ಸನ್ನು 21 ರಿಂದ 18 ವರ್ಷಕ್ಕೆ ಇಳಿಸಬೇಕು ಎಂಬುದು ನನ್ನ ನಿಲುವು ಎಂದರು.

Latest Indian news

Popular Stories

error: Content is protected !!