2 ವರ್ಷಗಳ ಬಳಿಕ ಕೇದಾರನಾಥ ಯಾತ್ರೆ ಆರಂಭ: ಪವಿತ್ರ ಕ್ಷೇತ್ರಕ್ಕೆ ಯಾತ್ರಾರ್ಥಿಗಳ ಪ್ರವಾಹ, 28 ಮಂದಿ ಮೃತ್ಯು

0
398

ಡೆಹ್ರಾಡೂನ್: ಕೋವಿಡ್ ನಿರ್ಬಂಧಗಳ ಹಿನ್ನಲೆಯಲ್ಲಿ ಬರೊಬ್ಬರಿ 2 ವರ್ಷಗಳ ಚಾರ್ ಧಾಮ್ ಯಾತ್ರೆ ಆರಂಭಗೊಂಡಿದ್ದು ಪವಿತ್ರ ಕ್ಷೇತ್ರಗಳಿಗೆ ಭಕ್ತರ ಪ್ರವಾಹವೇ ಹರಿದು ಬರುತ್ತಿದೆ. ಈ ವರೆಗೂ 28 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಹೌದು.. ಉತ್ತರಾಖಂಡದ ಚಾರ್ ಧಾಮ್‌ಗಳಲ್ಲಿ ಒಂದಾದ ಕೇದಾರನಾಥ ದೇವಾಲಯಕ್ಕೆ ಅಭೂತಪೂರ್ವ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಇಂಡೋ-ಟಿಬೆಟಿಯನ್ ಬಾರ್ಡರ್ ಫೋರ್ಸ್ (ITBP) ಅನ್ನು ಶುಕ್ರವಾರ ಜನಸಂದಣಿ ನಿರ್ವಹಣೆಗಾಗಿ ನಿಯೋಜಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಐಟಿಬಿಪಿ ವಕ್ತಾರ ವಿವೇಕ್ ಕುಮಾರ್ ಪಾಂಡೆ ಅವರು, ಜನಸಂದಣಿ ನಿರ್ವಹಣೆಗಾಗಿ ITBP ಅನ್ನು ಕೇದಾರನಾಥದಲ್ಲಿ ನಿಯೋಜಿಸಲು ನಿರ್ಧರಿಸಲಾಯಿತು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಕೂಡ ದೇವಸ್ಥಾನಗಳಿಗೆ ಜನಸಂದಣಿಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನೆಲೆಯಲ್ಲಿ ಕೇದಾರನಾಥ ದೇಗುಲದಲ್ಲಿ ಭದ್ರತೆ ಹಾಗೂ ಸುಗಮ ದರ್ಶನಕ್ಕೆ ಪಡೆಗಳನ್ನು ನಿಯೋಜಿಸಲಾಗಿದೆ. ಐಟಿಬಿಪಿಯು ಕೇದಾರನಾಥ ದೇವಸ್ಥಾನ ಮತ್ತು ಕೇದಾರನಾಥ ಕಣಿವೆಗೆ ಭಾರೀ ಜನದಟ್ಟಣೆಯನ್ನು ನಿರ್ವಹಿಸುತ್ತಿದೆ ಎಂದು ಹೇಳಿದರು.

ಪ್ರತಿದಿನ 20,000 ಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ ಮತ್ತು ಯಾತ್ರಾರ್ಥಿಗಳ ವಿಪರೀತ ಸ್ಥಳಗಳಾದ ಸೋನ್‌ಪ್ರಯಾಗ, ಉಖಿಮಠ ಮತ್ತು ಕೇದಾರನಾಥ ಯಾತಾರ್ಥಿಗಳಿಂದ ತುಂಬಿ ತುಳುಕುತ್ತಿದೆ. ಈ ಸ್ಥಳಗಳಲ್ಲಿ ನಿಯೋಜಿಸಲಾದ ಐಟಿಬಿಪಿ ತಂಡಗಳು ಯಾತ್ರಿಗಳ ಚಲನವಲನದ ಮೇಲೆ ನಿಗಾ ಇಡುತ್ತಿವೆ ಎಂದು ಪಾಂಡೆ ಹೇಳಿದರು.

LEAVE A REPLY

Please enter your comment!
Please enter your name here