20,000 ಕೋಟಿ ಎಫ್ ಪಿಒ ವಾಪಸ್ ಪಡೆದ ಅದಾನಿ ಸಮೂಹ: ಹೂಡಿಕೆದಾರರಿಗೆ ಹಣ ವಾಪಸ್ ಘೋಷಣೆ

ಮುಂಬೈ:  ಗೌತಮ್ ಅದಾನಿ ಸಮೂಹ ರೂ.20,000 ಕೋಟಿ ರೂಗಳ ಫಾಲೋ ಆನ್ ಷೇರುಗಳ ಮಾರಾಟವನ್ನು ಹಿಂಪಡೆಯುವುದಾಗಿ ಫೆ.1 ರಂದು ಘೋಷಿಸಿದೆ. 

ಹೂಡಿಕೆದಾರರಿಗೆ ಲಾಭವನ್ನು ವಾಪಸ್ ನೀಡುವುದಾಗಿ ಸಂಸ್ಥೆ ತಿಳಿಸಿದೆ. ಸಂಸ್ಥೆಯ ಎಫ್ ಪಿಒ ಕೊನೆಯ ದಿನದಂದು ಪೂರ್ಣಪ್ರಮಾಣದಲ್ಲಿ ಖರೀದಿಯಾದ ಮರುದಿನ ಸಂಸ್ಥೆ ಈ ಘೋಷಣೆ ಮಾಡಿದೆ.   

ಹಿಂದೆಂದೂ ಕಾಣದ ಪರಿಸ್ಥಿತಿ ಹಾಗೂ ಈಗಿನ ಮಾರುಕಟ್ಟೆ ಅಸ್ಥಿರತೆ ಹಿನ್ನೆಲೆಯಲ್ಲಿ ಪೂರ್ಣಪ್ರಮಾಣದ ಚಂದಾದಾರ ಎಫ್ ಪಿಒವನ್ನು ಮುಂದುವರೆಸದಿರಲು ಅದಾನಿ ಎಂಟರ್ ಪ್ರೈಸಸ್ ನ ಮಂಡಳಿ ನಿರ್ಧರಿಸಿದೆ. ಹೂಡಿಕೆದಾರರ ಹಿತಾಸಕ್ತಿಯನ್ನು ಕಾಪಾಡಲು ಸಂಸ್ಥೆ ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಎಫ್ ಪಿಒ ಲಾಭವನ್ನು ವಾಪಸ್ ನೀಡಲು ಹಾಗೂ ಇಡಿ ವಹಿವಾಟುಗಳನ್ನು ವಾಪಸ್ ಪಡೆಯುವುದಕ್ಕೆ ಸಂಸ್ಥೆ ನಿರ್ಧರಿಸಿದೆ ಎಂದು ಅದಾನಿ ಸಮೂಹ ಪ್ರಕಟಣೆಯಲ್ಲಿ ತಿಳಿಸಿದೆ. 

ಆಫರ್ ನ ಬೆಲೆಯಾಗಿದ್ದ 4.55 ಕೋಟಿ ಷೇರುಗಳಿಗಿಂತ ಹೆಚ್ಚು ಅಂದರೆ 4.65 ಕೋಟಿ ಮೌಲ್ಯದ ಷೇರುಗಳ ಖರೀದಿಯಾಗಿತ್ತು. ಬಿಎಸ್ಇ ಡೇಟಾ ಪ್ರಕಾರ ಸಾಂಸ್ಥಿಕವಲ್ಲದ ಹೂಡಿಕೆದಾರಿಗೆ ಮೀಸಲಾಗಿರಿಸಿದ್ದ 96.16 ಲಕ್ಷ ಷೇರುಗಳಿಗಿಂತಲೂ ಮೂರು ಪಟ್ಟು ಷೇರುಗಳನ್ನು ಕೇಳಿದ್ದರು. ಅರ್ಹ ಸಾಂಸ್ಥಿಕ ಖರೀದಿದಾರ (ಕ್ಯುಐಬಿ)ರಿಗೆ ಮೀಸಲಿರಿಸಿದ್ದ 1.28 ಕೋಟಿ ಷೇರುಗಳು ಪೂರ್ಣವಾಗಿ ಚಂದಾದಾರನ್ನು ಪಡೆದಿತ್ತು. 

ಆದರೆ ರಿಟೇಲ್ ಹೂಡಿಕೆದಾರರು ಹಾಗೂ ಕಂಪನಿ ನೌಕರರಿಗೆ ಕಳಪೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು.  ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್ ನ ಅಧ್ಯಕ್ಷರಾಗಿರುವ ಗೌತಮ್ ಅದಾನಿ, ಎಫ್ ಪಿಒ ಗೆ ಚಂದಾದಾರಿಕೆ ಮಂಗಳವಾರ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಮುಕ್ತಾಯವಾಗಿದೆ ಎಂದು ತಿಳಿಸಿದ್ದರು.

Latest Indian news

Popular Stories