ಬೆಂಗಳೂರು: ಕೆಪಿಸಿಸಿ ಸಮಿತಿವತಿಯಿಂದ ಕೆಲ ವಿಭಾಗಗಳಿಗೆ ಚೇರ್ಮನ್ , ಕೋ-ಚೇರ್ಮನ್ ಮತ್ತು ಸಂಚಾಲಕರು ನೇಮಕ ಮಾಡಲಾಗಿದೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚನೆ ಅನ್ವಯ ಕಾರ್ಯಧ್ಯಕ್ಷ ಸಲೀಮ್ ಅಹಮದ್ ಖಾನ್ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಸಹಕಾರ ವಿಭಾಗದ ಚೇರ್ಮನ್ ಆಗಿ ಮಾಜಿ ಸಚಿವ ಶಿವಾನಂದ ಪಾಟೀಲ್ ನೇಮಕ. ಕೋ ಚೇರ್ಮೆನ್ ಆಗಿ ಧಾರವಾಡದ ಮಾಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರ ಗೌಡ ಎಸ್ ಪಾಟೀಲ್ ನೇಮಕ. ಸಹಕಾರ ವಿಭಾಗದ ಸಂಚಾಲಕರನ್ನಾಗಿ ಮಂಜುನಾಥ್ ಗೌಡ ನೇಮಕ ಪ್ರೊ ಕೆ. ಇ ರಾಧಾಕೃಷ್ಣ ಅವರನ್ನು ವಿಚಾರ ವಿಭಾಗ ಸೆಲ್ ನ ಚೇರ್ಮನ್ ಆಗಿ ನೇಮಕ ಮಾಡಲಾಗಿದೆ. ರಾಧಾಕೃಷ್ಣ ರವರು ಈ ಹಿಂದೆ ಕೆಪಿಸಿಸಿಯ ಉಪಾಧ್ಯಕ್ಷರಾಗಿದ್ದರು
ಮುಖ್ಯಮಂತ್ರಿ ಚಂದ್ರು ಅವರನ್ನು ಸಾಂಸ್ಕೃತಿಕ ಘಟಕದ ಚೇರ್ಮನ್ ಆಗಿ ನೇಮಕ ಮಾಡಲಾಗಿದೆ. ಹಿಂದೆ ಇವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸಾಮಾಜಿಕ ನ್ಯಾಯ ಸೆವಿಭಾಗದ ಚೇರ್ಮನ್ ಆಗಿ ಡಾ. ಸಿ ಎಸ್ ದ್ವಾರಕಾನಾಥ್ ನೇಮಕ ಮಾಡಲಾಗಿದೆ. ಹಿಂದೆ ಇವರು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದರು.