2029 ರವರೆಗೂ ಮೋದಿ ಅವರೇ ಪ್ರಧಾನಿಯಾಗಿರಲಿ: ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ

ಮೈಸೂರು: ಕಳೆದ 2019 ರಲ್ಲೇ ನಾನು ಒಂದು ಲೇಖನ ಬರೆದಿದ್ದೆ. ಮತ್ತೊಮ್ಮೆ ಮೋದಿ ಅವರು ಸ್ಪಷ್ಟ ಬಹುಮತದೊಂದಿಗೆ ಪ್ರಧಾನಿ ಆಗಬೇಕು ಎಂದು ಬರೆದಿದ್ದೆ. ಈಗಲೂ 2024 ಮತ್ತು2029 ರವರೆಗೂ ಮೋದಿ ಅವರೇ ಪ್ರಧಾನಿಯಾಗಿರಲಿ ಆ ಬಳಿಕ ಅವರು ನಿವೃತ್ತಿ ಹೊಂದಲಿ ಎಂದು ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಹೇಳಿದರು.

ಮೈಸೂರಿನಲ್ಲಿ ಮಾತನಾಡಿದ ಅವರು,2029 ರ ಬಳಿಕ ನಂತರ ಅವರಂತ ಸೇವಾ ಮನೋಭಾವವಿರುವ ಇನ್ನೊಬ್ಬ ವ್ಯಕ್ತಿಯನ್ನು ತಯಾರು ಮಾಡಬೇಕು. ಮೋದಿಯಂತ ಪ್ರಧಾನ ಮಂತ್ರಿಯನ್ನು ನಾವು ಹಿಂದೆಂದೂ ನೋಡಿಲ್ಲ. ನಾನು ಯಾವುದೇ ರಾಜಕೀಯ ಪಕ್ಷದಲ್ಲಿಯೂ ಇಲ್ಲ. ಯಾವುದೇ ಪಕ್ಷವನ್ನು ಓಲೈಸಲು ಈ ಮಾತು ಹೇಳುತ್ತಿಲ್ಲ. ದೇಶದಲ್ಲಿ ಉತ್ತಮ ಆಡಳಿತವನ್ನ ಮೋದಿ ನೀಡುತ್ತಿದ್ದಾರೆ. ಹಾಗಾಗಿ ಅವರ ಸೇವೆ ಇನ್ನಷ್ಟು ಈ ದೇಶಕ್ಕೆ ಬೇಕಿದೆ ಎಂದಿದ್ದಾರೆ.

Latest Indian news

Popular Stories