22 ವರ್ಷದ ಇಟಲಿ ವಿದ್ಯಾರ್ಥಿನಿಯ ಹತ್ಯೆ – ಮಾಜಿ ಪ್ರಿಯಕರನ ಕೃತ್ಯ

ನವ ದೆಹಲಿ: ಇಟಲಿಯ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಅಸೂಯೆ ಪೀಡಿತ ಮಾಜಿ ಗೆಳೆಯ ಹತ್ಯೆ ಮಾಡಿರುವುದು ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ಮಹಿಳೆಯರ ಮೇಲಿನ ದೌರ್ಜನ್ಯದ ವಿಷಯದ ಕುರಿತು ಸಂವಾದವನ್ನು ಹುಟ್ಟುಹಾಕಿದೆ.

ವೆನಿಸ್ ಬಳಿಯ ಸಣ್ಣ ಪಟ್ಟಣದ ನಿವಾಸಿ 22 ವರ್ಷದ ಗಿಯುಲಿಯಾ ಸೆಚೆಟ್ಟಿನ್ ಹಲವು ಇರಿತಕ್ಕೊಳಗಾಗಿ ಸರೋವರದ ಬಳಿ ಸಿಕ್ಕಿದ್ದು ಮೃತಪಟ್ಟ ಸ್ಥಿತಿಯಲ್ಲಿದ್ದಳು. ತನ್ನ ಮಾಜಿ ಪ್ರಿಯಕರನೊಂದಿಗೆ ಫಿಲಿಪ್ಪೊ ಟ್ಯುರೆಟ್ಟಾ ಅವರೊಂದಿಗೆ ಹೊರಗೆ ಹೋದ ನಂತರ ಒಂದು ವಾರದಿಂದ ಕಾಣೆಯಾಗಿದ್ದಳು. ಇದೀಗ ಆಕೆಯ ಮೃತದೇಹ ಪತ್ತೆಯಾಗಿದೆ.

ತನಿಖೆಯಿಂದ ಆಕೆಯ ಮಾಜಿ ಪ್ರಿಯಕರನೇ ಹತೈಗೈದಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಇದೀಗ ಆಕೆಯ ಹತ್ಯೆ ಮಹಿಳಾ ಹಕ್ಕುಗಳ ಕುರಿತು ಚರ್ಚೆ ಹುಟ್ಟು ಹಾಕಿದೆ.

Latest Indian news

Popular Stories