28 ವರ್ಷದ ಕೂಲಿ ಕಾರ್ಮಿಕ ಸಾಜಿದ್ ಅಬ್ಬಾಸಿ ಪೊಲೀಸ್ ಕಸ್ಟಡಿಯಲ್ಲಿ ಮೃತ್ಯು

ಲಖನೌ: 28 ವರ್ಷದ ಕೂಲಿ ಕಾರ್ಮಿಕ ಸಾಜಿದ್ ಅಬ್ಬಾಸಿ ಎಂಬಾತ ಪೊಲೀಸರು ಥಳಿಸಿದ ಕಾರಣ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ.

ಪಶ್ಚಿಮ ಯುಪಿಯ ಬಾಗ್‌ಪತ್ ಜಿಲ್ಲೆಯ ರತೌಲ್ ಗ್ರಾಮದ ಸಂತ್ರಸ್ತ, ಜೂಜಾಟದ ಶಂಕೆಯ ಮೇಲೆ ಆತನನ್ನು ಎತ್ತಿಕೊಂಡು ಬಂದ ಸ್ಥಳೀಯ ಪೊಲೀಸರು ಬಿಡುಗಡೆ ಮಾಡಿದ ಅರ್ಧ ಗಂಟೆಯ ನಂತರ ಸಾವನ್ನಪ್ಪಿದ್ದನು. ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ತನ್ನ ಮಗನನ್ನು ಪೊಲೀಸರು ಭೀಕರವಾಗಿ ಥಳಿಸಿದ್ದಾರೆ. ಬಿಡುಗಡೆ ವೇಳೆ ಆತನ ಸ್ಥಿತಿ ಗಂಭೀರವಾಗಿತ್ತು ಎಂದು ಸಾಜಿದ್ ತಂದೆ ಬಾಬು ಅಬ್ಬಾಸಿ ಹೇಳಿದ್ದಾರೆ.

ಮೂವರು ಪೊಲೀಸ್ ಪೇದೆಗಳು ಆತನನ್ನು ನಿರ್ದಯವಾಗಿ ಥಳಿಸುತ್ತಿರುವುದನ್ನು ಗ್ರಾಮಸ್ಥರು ಸಹ ನೋಡಿದ್ದಾರೆ ಎಂದು ತಂದೆ ಹೇಳಿದರು. ಸಾಜಿದ್ ನಿಧನದಿಂದ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಸ್ತೆ ತಡೆ ನಡೆಸಿದರು.

ಮೃತನ ಕುಟುಂಬ ಮತ್ತು ಗ್ರಾಮಸ್ಥರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ಕೈಗೊಳ್ಳುವ ಭರವಸೆ ನೀಡಿದ ನಂತರ ಸಮಾಧಾನಗೊಂಡರು ಎಂದು ಬಾಗ್‌ಪತ್ ಎಸ್ ಪಿ ಅರ್ಪಿತ್ ವಿಜಯವರ್ಗಿಯ ಹೇಳಿದ್ದಾರೆ. 

ಜೂಜಾಟದ ಶಂಕೆಯ ಮೇರೆಗೆ ಆತನನ್ನು ಬಂಧಿಸಲಾಗಿತ್ತು ಆದರೆ ಆತನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ನಂತರ ಬಿಡುಗಡೆ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಕುಟುಂಬವು ಯಾವುದೇ ದೂರು ನೀಡದ ಕಾರಣ ಪ್ರಕರಣದಲ್ಲಿ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದದಾರೆ. ಘಟನೆಯ ಬಗ್ಗೆ ಈಗಾಗಲೇ ತನಿಖೆಯನ್ನು ಪ್ರಾರಂಭಿಸಲಾಗಿದೆ. ಶವಪರೀಕ್ಷೆಯ ನಂತರವೇ ಸಾವಿನ ಕಾರಣವನ್ನು ಸ್ಪಷ್ಟಪಡಿಸಲಾಗುವುದು ಎಂದು ಬಾಗ್‌ಪತ್ ಎಎಸ್ಪಿ ಮನೀಶ್ ಕುಮಾರ್ ಹೇಳಿದ್ದಾರೆ.

Latest Indian news

Popular Stories