3ನೇ ಟೆಸ್ಟ್: ಪಂತ್‌ ಶತಕದ ಹೊರತಾಗಿಯೂ ಭಾರತಕ್ಕೆ ಹಿನ್ನಡೆ, ಬಲಿಷ್ಠ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ

ಕೇಪ್ ಟೌನ್: ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯ ರೋಚಕ ಸ್ಥಿತಿಗೆ ತಲುಪಿದ್ದು, ವಿಕೆಟ್ ಕೀಪರ್ ರಿಷಭ್‌ ಪಂತ್‌ ಶತಕದ ಹೊರತಾಗಿಯೂ ಟೀಂ ಇಂಡಿಯಾ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ದಿನ ಹಿನ್ನಡೆ ಅನುಭವಿಸಿದೆ.

ಭಾರತ ನೀಡಿದ 212 ರನ್‌ಗಳ ಗುರಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಮೂರನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ. ಗೆಲುವಿಗೆ ಇನ್ನೂ 111 ರನ್‌ ಅಗತ್ಯವಿದ್ದು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.

ದಕ್ಷಿಣ ಆಫ್ರಿಕಾ ನಾಯಕ ಡೀನ್‌ ಎಲ್ಗರ್‌ ಅವರು 30 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ ಕೀಗನ್‌ ಪೀಟರ್ಸನ್‌(48*) 4ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

70 ರನ್‌ ಮುನ್ನಡೆಯೊಂದಿಗೆ ಗುರುವಾರ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ, ರಿಷಭ್‌ ಪಂತ್‌(100*) ವೃತ್ತಿ ಜೀವನದ ನಾಲ್ಕನೇ ಶತಕದ ಹೊರತಾಗಿಯೂ ಭಾರತ ತಂಡ ಮೂರನೇ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ 198 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ದಕ್ಷಿಣ ಆಫ್ರಿಕಾ ಗೆಲುವಿಗೆ 212 ರನ್‌ ಗುರಿ ನೀಡಿತ್ತು.

Latest Indian news

Popular Stories