ಅಮೇರಿಕಾದಲ್ಲಿ ಭಾರತೀಯ ಮೂಲದ ಉದ್ಯಮಿಯಿಂದ 8300 ಕೋಟಿ ವಂಚನೆ!

ವಾಷಿಂಗ್ಟನ್:‌8,300 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ಉದ್ಯಮಿ, Outcome ಹೆಲ್ತ್‌ ನ ಮಾಜಿ ಬಿಲಿಯನೇರ್‌ ಸಹ ಸಂಸ್ಥಾಪಕ ರಿಷಿ ಶಾಗೆ ಅಮೆರಿಕದ ಕೋರ್ಟ್‌ ಏಳೂವರೆ ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿರುವುದಾಗಿ ವರದಿ ತಿಳಿಸಿದೆ.

8300 ಕೋಟಿ ರೂಪಾಯಿಯ ಬೃಹತ್‌ ಹಗರಣದಿಂದಾಗಿ ಗೋಲ್ಡ್‌ ಮ್ಯಾನ್‌ Sachs group, ಗೂಗಲ್‌ ಪೇರೆಂಟ್‌ ಅಲ್ಫಾಬೆಟ್‌, ಇಲಿನಾಯ್ಸ್‌ ಗವರ್ನರ್‌ ಜೆಬಿ ಪ್ರೈಜಕರ್‌ ನಂತಹ ಪ್ರತಿಷ್ಠಿತ ಹೂಡಿಕೆದಾರರಿಗೆ ಕಳವಳ ಹುಟ್ಟಿಸಿರುವುದಾಗಿ ವರದಿ ವಿವರಿಸಿದೆ.
ಉದ್ಯಮಿ ರಿಷಿ ಶಾ ವಿರುದ್ಧದ ಪ್ರಕರಣದ ಕುರಿತು ಅಮೆರಿಕದ ಜಿಲ್ಲಾ ಜಡ್ಜ್‌ ಥೋಮಸ್‌ ಡರ್ಕಿನ್‌ ವಾದ-ಪ್ರತಿವಾದ ಆಲಿಸಿದ ನಂತರ ತೀರ್ಪು ಪ್ರಕಟಿಸಿದ್ದು, ಇದು ಅಮೆರಿಕದ ಇತಿಹಾಸದಲ್ಲಿನ ಅತಿದೊಡ್ಡ ಕಾರ್ಪೋರೇಟ್‌ ಹಗರಣವಾಗಿದೆ ಎಂದು ತಿಳಿಸಿದೆ.

ಬ್ಲೂಮ್‌ ಬರ್ಗ್‌ ವರದಿ ಪ್ರಕಾರ, ಶಾ ಯೂನಿರ್ವಸಿಟಿ ದಿನಗಳಲ್ಲಿಯೇ ಔಟ್‌ ಕಮ್‌ ಹೆಲ್ತ್‌ ಯೋಜನೆಯ ಪರಿಕಲ್ಪನೆಯನ್ನು ಹುಟ್ಟುಹಾಕಿರುವುದಾಗಿ ತಿಳಿಸಿದೆ. ಇದೊಂದು ಮೀಡಿಯಾ ಹೆಲ್ತ್‌ ಕಂಪನಿ. 2006ರಲ್ಲಿ ಕಂಪನಿಯನ್ನು ಸ್ಥಾಪಿಸಲಾಗಿತ್ತು. ರೋಗಿಗಳನ್ನು ಸೆಳೆಯುವ ನಿಟ್ಟಿನಲ್ಲಿ ವೈದ್ಯರ ಆಫೀಸ್‌ ಗಳಲ್ಲಿ ವೈದ್ಯಕೀಯ ಜಾಹೀರಾತುಗಳನ್ನು ಟಿಲಿವಿಷನ್‌ ಮೂಲಕ ಪ್ರಸ್ತುತಪಡಿಸುವುದು ಔಟ್‌ ಕಮ್‌ ಹೆಲ್ತ್‌ ನ ಮುಖ್ಯ ಉದ್ದೇಶವಾಗಿತ್ತು.

2010ರ ಹೊತ್ತಿಗೆ Outcome Health ಟೆಕ್‌ ಮತ್ತು ಹೆಲ್ತ್‌ ಕೇರ್‌ ಕಮ್ಯುನಿಟೀಸ್‌ ನಲ್ಲಿ ದೊಡ್ಡ ಹೆಸರು ಮಾಡಿತ್ತು. ಅಲ್ಲದೇ ಕಂಪನಿಗೆ ದೊಡ್ಡ ಪ್ರಮಾಣದ ದೇಣಿಗೆ ಹರಿದು ಬಂದಿತ್ತು. ಇದರೊಂದಿಗೆ ಶಾ ಚಿಕಾಗೋ ಕಾರ್ಪೋರೇಟ್‌ ವಲಯದಲ್ಲಿ ಕೋಟ್ಯಧಿಪತಿ ಉದ್ಯಮಿಯಾಗಿ ಹೊರಹೊಮ್ಮಿದ್ದರು.
ಸಾವಿರಾರು ಕೋಟಿ ರೂ. ಬಂಡವಾಳದ ಕಂಪನಿಯ ವಹಿವಾಟಿನ ನಂತರ ಶಾ, ಶ್ರದ್ಧಾ ಅಗರ್ವಾಲ್‌ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಬ್ರಾಡ್‌ ಪುರ್ಡೈ ಜತೆಗೂಡಿ ಹೂಡಿಕೆದಾರರಿಗೆ, ಕ್ಲಯಂಟ್‌ ಗಳಿಗೆ ದೊಡ್ಡ ಪ್ರಮಾಣದಲ್ಲಿ ವಂಚನೆ ಎಸಗಿರುವುದಾಗಿ ವರದಿ ವಿವರಿಸಿದೆ.
2017ರಲ್ಲಿ ವಾಲ್‌ ಸ್ಟ್ರೀಟ್‌ ಜರ್ನಲ್‌ ಔಟ್‌ ಕಮ್‌ ಹೆಲ್ತ್‌ ನ ಹಗರಣವನ್ನ ಬಯಲಿಗೆಳೆಯುವ ಮೂಲಕ ಶಾ ವಂಚನೆ ಬಹಿರಂಗವಾಗಿತ್ತು. ಈ ಬಗ್ಗೆ ಶಾ ವಿರುದ್ಧ 12ಕ್ಕೂ ಅಧಿಕ ವಂಚನೆ ಪ್ರಕರಣಗಳು ದಾಖಲಾಗಿದ್ದು, 2023ರ ಏಪ್ರಿಲ್‌ ನಲ್ಲಿ ಕೋರ್ಟ್‌ ದೋಷಿ ಎಂದು ತೀರ್ಪು ನೀಡಿತ್ತು.

Latest Indian news

Popular Stories