ಸಿಗರೇಟ್ ಕೇಳಿದ ಸಹೋದ್ಯೋಗಿ ಮೇಲೆ ಏಳು ಮಂದಿ ಹೋಟೆಲ್ ಉದ್ಯೋಗಿಗಳಿಂದ ಹಲ್ಲೆ!

ಬೆಂಗಳೂರು: ಸಿಗರೇಟ್ ಕೇಳಿದ ಮತ್ತೊಬ್ಬ ಸಹೋದ್ಯೋಗಿ ಮೇಲೆ ಏಳು ಮಂದಿ ಹೋಟೆಲ್ ಉದ್ಯೋಗಿಗಳು ಹಲ್ಲೆ ನಡೆಸಿದ್ದಾರೆ. ನೌಕರರ ನಡುವಿನ ಮಾತಿನ ಚಕಮಕಿ ಸಂತ್ರಸ್ತನನ್ನು ಅರೆಬೆತ್ತಲೆಯಾಗಿ ವಿವಸ್ತ್ರಗೊಳಿಸಿದ್ದು, ರಸ್ತೆಯ ಮಧ್ಯದಲ್ಲಿ ದೊಣ್ಣೆಗಳು, ಕಲ್ಲುಗಳು ಮತ್ತು ಬೆಲ್ಟ್‌ಗಳಿಂದ ಹಲ್ಲೆ ನಡೆಸಲಾಗಿದೆ.

ಘಟನೆಯನ್ನು ರೆಕಾರ್ಡ್ ಮಾಡಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲ್ಲೆಗೊಳಗಾದ ಯುವಕನನನ್ನು ದಂಗ್ಯಾ (28) ಎಂದು ಗುರುತಿಸಲಾಗಿದೆ. ನೌಕರನ ಮೇಲೆ ಹಲ್ಲೆ ನಡೆಸಿದ ಏಳು ಆರೋಪಿಗಳ ವಿರುದ್ಧ ಹೋಟೆಲ್ ಮ್ಯಾನೇಜರ್ ಶುಕ್ರವಾರ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಡುಗೋಡಿ ಪೊಲೀಸರು ಶುಕ್ರವಾರ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನೇಪಾಳ ಮೂಲದ ಆಕಾಶ್, ವಿಶಾಲ್ ಜೋಶಿ ಮತ್ತು ಸುರೇಂದರ್, ಕರ್ನಾಟಕದ ವಿವಿಧ ಜಿಲ್ಲೆಗಳ ಮಂಜುನಾಥ್, ಸಂತೋಷ್, ಅಮರೇಶ್ ಮತ್ತು ನವೀನ್ ಎಂದು ಪೊಲೀಸರು ಗುರುತಿಸಿದ್ದಾರೆ. ಎಲ್ಲರೂ 22 ರಿಂದ 25 ವರ್ಷದೊಳಗಿನವರು. ಸಂತ್ರಸ್ತ ಸಿಗರೇಟ್ ಕೇಳಿದಾಗ ಏಳು ಆರೋಪಿಗಳು ಕುಡಿದ ಅಮಲಿನಲ್ಲಿದ್ದರು ಮತ್ತು ಅವರು ನಕಾರಾತ್ಮಕವಾಗಿ ಉತ್ತರಿಸಿದರು. ಇದರಿಂದ ತೀವ್ರ ವಾಗ್ವಾದ ನಡೆದು ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Latest Indian news

Popular Stories