“ಜೈ ಶ್ರೀರಾಮ್” ಮತ್ತು ಮೋದಿ ಪರ ಘೋಷಣೆ ಕೂಗುತ್ತ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಬಸ್ ಬಳಿ ಬಂದ ಗುಂಪು – ಬಸ್’ನಿಂದ ಇಳಿದು ಧೈರ್ಯದಿಂದ ಜನರ ಬಳಿ ತೆರಳಿದ ರಾಹುಲ್ ಗಾಂಧಿ

ಗುವಾಹಟಿ: ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆಯಲ್ಲಿ ಜೈ ಶ್ರೀರಾಮ್ ಹಾಗೂ ಪ್ರಧಾನಿ ಮೋದಿ ಪರ ಜಯ ಘೋಷಣೆಗಳಿಂದ ಗುಂಪೊಂದು ರಾಹುಲ್ ಗಾಂಧಿ ಬಸ್ ಬಳಿ ಬಂದಿದೆ ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಧೈರ್ಯದಿಂದ ಬಸ್ಸಿನಿಂದ ಇಳಿದು ಜನರ ಬಳಿ ತೆರಳಿದ ವೀಡಿಯೋ ವೈರಲಾಗಿದೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ವೀಡಿಯೋ ಪೋಸ್ಟ್ ಮಾಡಿದ್ದರು ಇದಕ್ಕೆ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಶ್ರಿನಾಟೆ,  ರಾಹುಲ್ ಗಾಂಧಿ ತಾಳ್ಮೆ ಕಳೆದುಕೊಂಡಿಲ್ಲ.  ಘೋಷಣೆ ಕೂಗುತ್ತಿದ್ದ ಜನರ ಬಳಿ ಮಾತನಾಡಲು ತೆರಳುತ್ತಿದ್ದಾಗ ಗುಂಪು ಅಲ್ಲಿಂದ ತೆರಳಿದೆ. ಅದನ್ನು ಅವರು ಧೈರ್ಯದಿಂದ ಮಾಡಿದ್ದಾರೆ. ಬಿಜೆಪಿಯವರು ಅರ್ಥಮಾಡಿಕೊಂಡಿಲ್ಲ. ಈಗ ಬಾಯಿಮುಚ್ಚಿಕೊಂಡು, ಕುಳಿತಿದ್ದಾರೆ ಎಂದು ಹೇಳಿದ್ದಾರೆ.

Latest Indian news

Popular Stories