ರಾಯಚೂರು: ತಾಲೂಕಿನ ಗಾರಲದಿನ್ನಿ ಗ್ರಾಮದಲ್ಲಿ ನಾಲ್ವರು ಮಕ್ಕಳಿಗೆ ಹುಚ್ಚುನಾಯಿ ಕಚ್ಚಿದ್ದು, ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಬುಧವಾರ ಮಧ್ಯಾಹ್ನ ಮನೆಯ ಅಂಗಳದಲ್ಲಿ ಆಟವಾಡುವಾಗ ದಾಳಿ ಮಾಡಿದ ನಾಯಿ ಪಾವನಿ(7), ಆಸೀಯಾ (3) ಹಾಗೂ ಅಲ್ಸಿಯಾ ಮಹ್ಮದಿಯಾ ಸೇರಿ ನಾಲ್ವರು ಬಾಲಕಿಯರಿಗೆ ಮನಬಂದಂತೆ ಕಚ್ಚಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಮೂವರು ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೋರ್ವ ಬಾಲಕಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗೊತ್ತಾಗಿದೆ.
ಹುಚ್ಚುನಾಯಿ ದಾಳಿಯಿಂದ ಜಾನುವಾರು, ಕುರಿಗಳಿಗೂ ಗಾಯವಾಗಿದ್ದು ಆಕ್ರೋಶಗೊಂಡ ಗ್ರಾಮಸ್ಥರು ಹುಚ್ಚು ನಾಯಿಯ ಕೊಂದು ಹಾಕಿದ್ದಾರೆ.