ಮುಸ್ಲಿಂ ಮಹಿಳೆಯು ವಿವಾಹೇತರ ಸಂಬಂಧವನ್ನು ಹೊಂದುವುದು (ಝಿನಾ) ವ್ಯಭಿಚಾರ – ಹೈಕೋರ್ಟ್

ಪ್ರಯಾಗರಾಜ್‌: ಲಿವ್‌-ಇನ್‌ ರಿಲೇಶನ್‌ಶಿಪ್‌ನಲ್ಲಿರುವ ವಿವಾಹಿತ ಮುಸ್ಲಿಮ್‌ ಮಹಿಳೆಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿದೆ. ಕಾನೂನುಬದ್ಧವಾಗಿ ಮದುವೆಯಾಗಿರುವ ಮುಸ್ಲಿಂ ಮಹಿಳೆಯು ವಿವಾಹೇತರ ಸಂಬಂಧವನ್ನು ಹೊಂದುವುದಾಗಲಿ ಮತ್ತು ಲಿವ್‌ ಇನ್‌ ರಿಲೇಶನ್‌ಶಿಪ್‌ಲ್ಲಿರುವುದಾಗಲಿ ಶರಿಯಾ ಕಾನೂನು ಪ್ರಕಾರ ಮಾನ್ಯವಲ್ಲ. ಅಂಥ ಸಂಬಂಧವು ಝಿನಾ(ವ್ಯಭಿಚಾರ) ಮತ್ತು ಹರಾಮ್‌ (ನಿಷಿದ್ಧ) ಎನಿಸಿಕೊಳ್ಳುತ್ತದೆ ಎಂದು ಹೈಕೋರ್ಟ್‌ ಹೇಳಿದೆ.

ಪುರುಷನೊಂದಿಗೆ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದ ಮಹಿಳೆಯೊಬ್ಬಳು ತನ್ನ ತಂದೆ ಹಾಗೂ ಸಂಬಂಧಿಕರಿಂದ ಜೀವ ಬೆದರಿಕೆ ಇದ್ದು ರಕ್ಷಣೆ ನೀಡುವಂತೆ ಕೋರ್ಟ್‌ ಮೊರೆ ಹೋಗಿದ್ದಳು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ರೇಣು ಅಗರ್ವಾಲ್‌ ಅವರು, ಈ ಅಪರಾಧ ಕೃತ್ಯವನ್ನು ನ್ಯಾಯಾಲಯ ದಿಂದ ಬೆಂಬಲಿಸುವುದಾಗಲಿ ರಕ್ಷಣೆ ಮಾಡುವುದಾಗಲಿ ಸಾಧ್ಯವಿಲ್ಲ ಎಂದು ಹೇಳಿದರು.

Latest Indian news

Popular Stories