ಉ.ಕ: ಪ. ಪಂ. ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ನಾರಾಯಣ ನಾಯಕ್ , ಬಿಜೆಪಿ ಸದಸ್ಯ ವಿಜು ವೆಂಟಕರಮಣ ಕಾಮತ್‌ಗೆ ನ್ಯಾಯಾಂಗ ಬಂಧನ : ಲಂಚಕೋರರಿಗೆ ಜನರಿಂದ ಛೀಮಾರಿ

ಕಾರವಾರ : ಅರವತ್ತು ಸಾವಿರ ಹಣ ಪಡೆಯುತ್ತಿದ್ದಾಗ ಹೊನ್ನಾವರ ಪಂಚಾಯತಿ ಮುಖ್ಯಾಧಿಕಾರಿ ಲೋಕಾ ಬಲೆಗೆ ಬಿದ್ದಿದ್ದ ಪ್ರವೀಣ್ ಕುಮಾರ್ ‌ನಾಯಕ, ಪ.ಪಂ. ಬಿಜೆಪಿ ಸದಸ್ಯ ವಿಜು ವೆಂಕಟರಮಣ ಕಾಮತ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


ಚಂದ್ರಹಾಸ ಎಂಬುವವರ ಭೂ ದಾಖಲೆ ಕೆಲಸ ಮಾಡಿಕೊಡಲು , ಹೊನ್ನಾವರ ಪಟ್ಟಣ ಪಂಚಾಯತ ಹಾಲಿ ಬಿಜೆಪಿ ಸದಸ್ಯ ವಿಜು ಕಾಮತ್ ಮೂಲಕ ಅರವತ್ತು ಸಾವಿರ ಲಂಚದ ಹಣವನ್ನು ಛೀಫ್ ಆಫೀಸರ್ ಪ್ರವೀಣ್ ಕುಮಾರ್ ನಾಯಕ್ ಪಡೆಯುತ್ತಿದ್ದಾಗ ಲೋಕಾಯುಕ್ತರು ದಾಳಿ ನಡೆಸಿದ್ದರು.

ಹೊನ್ನಾವರ ಪಟ್ಟಣ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ ಪ್ರವೀಣ್ ಕುಮಾರ ನಾಯಕ್ ೨.೫ ಲಕ್ಷ ಕ್ಕೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಬಿಜೆಪಿ ಸದಸ್ಯ ವಿಜು ಕಾಮತ್ ಮಧ್ಯಸ್ಥಿಕೆ ವಹಿಸಿದ್ದ. ಆತ ಹಣ ನೀಡುವ ವೇಳೆ
ಲೋಕಾಯುಕ್ತ ಎಸ್ ಪಿ ಕುಮಾರ ಚಂದ ನೇತೃತ್ವದಲ್ಲಿ ದಾಳಿ ನಡೆಸಿದ್ದರು.

ಹೊನ್ನಾವರ ಪಟ್ಟಣ ಪಂಚಾಯತಿ ಕಚೇರಿಯಿಂದ ಆರೋಪಿಗಳನ್ನು ಕರೆತರುವಾಗ ಜನ ತಳ್ಳಾಟ ನೋಕಾಟ ನಡೆಸಿ, ಲಂಚಕೋರರಿಗೆ ಛೀಮಾರಿ ಹಾಕಿದರು. ಲಂಚಪಡೆದ ಮುಖ್ಯಾಧಿಕಾರಿ ಪ್ರವೀಣ್ ನಾಯಕ, ಸದಸ್ಯ ವಿಜು ಕಾಮತ ರನ್ನು ಲೋಕಾಯುಕ್ತ ಅಧಿಕಾರಿಗಳು ನ್ಯಾಯಾಧೀಶರ ಎದುರು ಹಾಜರು ಪಡಿಸಿದರು. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
…..

ವೀಡಿಯೋ ಲಿಂಕ್:
https://www.facebook.com/share/v/KUcbYSiTvvqbyGkC/?mibextid=oFDknk

Latest Indian news

Popular Stories