ಉಡುಪಿ-ಚಿಕ್ಕಮಗಳೂರಿಗೆ ಕೋಟ ಶ್ರೀ ನಿವಾಸ್ ಪೂಜಾರಿ ಸೇರಿದಂತೆ ಐದು ಕ್ಷೇತ್ರಗಳಿಗೆ ಅಚ್ಚರಿಯ ಅಭ್ಯರ್ಥಿ?

ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಂಡಿದೆ. 4 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಆಗುವುದು ಖಚಿತ ಎನ್ನಲಾಗಿದೆ. ಈ ಮಧ್ಯೆ, ಇಂದು ಅಥವಾ ನಾಳೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಮೈಸೂರು- ಪ್ರತಾಪಸಿಂಹ ಅಥವಾ ಯದುವೀರ ಅವರಿಗೆ ಟಿಕೆಟ್‌ ಸಿಗಲಿದೆಯೇ ಎಂಬುದರ ಬಗ್ಗೆ ಚರ್ಚೆ

ಬೆಂಗಳೂರು ಉತ್ತರ - ಶೋಭಾ ಕರಂದ್ಲಾಜೆ. ಹಾಲಿ ಸಂಸದ ಡಿ.ವಿ.ಸದಾನಂದ ಗೌಡರಿಗೆ ಸ್ಪರ್ಧೆಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ
ದಕ್ಷಿಣ ಕನ್ನಡ – ಕ್ಯಾ| ಬೃಜೇಶ್‌ ಚೌಟ ಅಥವಾ ಡಾ| ವೈ. ಭರತ್‌ ಶೆಟ್ಟಿ.
ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ಗೆ ಸ್ಪರ್ಧೆಯ ಅವಕಾಶ ಕಡಿಮೆ

ಉಡುಪಿ- ಚಿಕ್ಕಮಗಳೂರು – ಕೋಟ ಶ್ರೀನಿವಾಸ ಪೂಜಾರಿ. ಬಿಲ್ಲವರು ಹಾಗೂ ನಾಮಧಾರಿ ಸಮುದಾಯದ ಆಕ್ರೋಶ ಶಮನ ಮಾಡುವುದಕ್ಕಾಗಿ ವರಿಷ್ಠರ ತಂತ್ರ

ಉತ್ತರ ಕನ್ನಡ- ಇನ್ನೂ ನಿರ್ಧಾರವಾಗಿಲ್ಲ. ಪ್ರಧಾನಿ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಕ್ಷೇತ್ರದ ವಿಷಯ ಚರ್ಚೆ ನಡೆಸಲಾಗಿಲ್ಲ ಎಂಬ ಬಗ್ಗೆ ಮಾಹಿತಿ.
ಇಂದು ಸಿಗಲಿದೆ ಉತ್ತರ
ಎಲ್ಲ ಕ್ಷೇತ್ರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಪ್ರತಿಯೊಬ್ಬರ ಕುತೂಹಲಕ್ಕೂ ಉತ್ತರ ಸಿಗಲಿದೆ. ಅಚ್ಚರಿಯ ಅಭ್ಯರ್ಥಿಯನ್ನೂ ವರಿಷ್ಠರೇ ನಿರ್ಧರಿಸುತ್ತಾರೆ.
– ಬಿ.ಎಸ್‌. ಯಡಿಯೂರಪ್ಪ,ಮಾಜಿ ಸಿಎಂ

Latest Indian news

Popular Stories