ಶಾಲೆ ಬಳಿಯ ಪೊದೆಯಲ್ಲಿತ್ತು ಮಹಿಳೆಯ ಬೆತ್ತಲೆ ಮೃತದೇಹ, ಅತ್ಯಾಚಾರ ಶಂಕೆ

ಆಂಧ್ರಪ್ರದೇಶ: ಇಲ್ಲಿನ ಶಾಲೆಯ ಬಳಿಯ ಪೊದೆಯೊಂದರಲ್ಲಿ ಮಹಿಳೆಯ ಬೆತ್ತಲೆ ಮೃತದೇಹ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.

ಆಂಧ್ರಪ್ರದೇಶದ ಬಪ್ತಾಲಾ ಜಿಲ್ಲೆಯಲ್ಲಿರುವ ಬಾಲಕಿಯರ ಪ್ರೌಢಶಾಲೆಯ ಬಳಿಯ ಪೊದೆಗಳಲ್ಲಿ ಬಟ್ಟೆ ಇಲ್ಲದೆ 21 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯನ್ನು ಕೊಲ್ಲುವ ಮೊದಲು ಅತ್ಯಾಚಾರ ಎಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮಹಿಳೆಯ ಕುಟುಂಬದ ಸದಸ್ಯರ ಹೇಳಿಕೆಯಂತೆ ಬಾಪಟ್ಲಾ ಜಿಲ್ಲೆಯ ಎಪುರುಪಾಲೆಂ ಗ್ರಾಮದ ಮಹಿಳೆ ಬೆಳಿಗ್ಗೆ 5:30 ರಿಂದ 5:45 ರ ನಡುವೆ ಮನೆಯಿಂದ ಹೊರಹೋಗಿದ್ದು ಆ ಬಳಿಕ ಹಿಂತಿರುಗಲಿಲ್ಲ ಇದರಿಂದ ಗಾಬರಿಗೊಂಡ ಮನೆಮಂದಿ ಹುಡುಕಲು ಹೋದಾಗ ಮೃತದೇಹ ಪೊದೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹತ್ಯೆಯ ತನಿಖೆಗಾಗಿ ಐದು ತಂಡಗಳನ್ನು ರಚಿಸಲಾಗಿದೆ ಮತ್ತು ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ ಅದರಂತೆ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸುವುದಾಗಿ ಹೇಳಿದ್ದಾರೆ.

Latest Indian news

Popular Stories