ಠಾಣೆ ಎದುರೇ ಬೆಂಕಿ ಹಾಕಿಕೊಂಡ ಆತ್ಮಹತ್ಯೆಗೆ ಯತ್ನಿಸಿದ ಯುವಕ ಇಂದು ಮೃತ್ಯು

ಕಾರವಾರ : ಜೊಯಿಡಾ ತಾಲ್ಲೂಕಿನ ರಾಮನಗರ ಠಾಣೆ ಪಿ.ಎಸ್.ಐ ನಿಂದ ಮಾನಸಿಕ ಕಿರುಕುಳ ಆರೋಪ ಹೊರಿಸಿ ಗುರುವಾರ ಪೊಲೀಸ್ ಠಾಣೆ ಎದುರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಇಂದು ಮೃತಪಟ್ಟಿದ್ದಾನೆ.

ಜೊಯಿಡಾ ರಾಮನಗರ ಗ್ರಾಮದ ಹನುಮಾನ್ ಗಲ್ಲಿಯ ನಿವಾಸಿ ಭಾಸ್ಕರ್ ಬೋಂಡೆಲ್ಕರ್ ಸಾವನ್ನಪ್ಪಿದ ಯುವಕ.

ಜೂಜಾಟ ಆರೋಪದಡಿ ತನ್ನ ಮಾವನ ವಿರುದ್ಧ ದಾಖಲಿಸಿದ್ದ ಪ್ರಕರಣದಲ್ಲಿ ರಾಮನಗರ ಪಿ.ಎಸ್.ಐ ಬಸವರಾಜ್ ಮಾಗನೂರು ಅವರ ಬಳಿ ವಿಚಾರಿಸಲು ಸ್ಟೆಶನ್ ಗೆ ತೆರಳಿದ್ದ.
ಗುರುವಾರ ತನ್ನ ಮಾವನ ಜಾಮೀನು ವಿಚಾರದಲ್ಲಿ ವಿಚಾರಿಸಲು ಆತ ತೆರಳಿದ್ದ. ಯುವಕ ಮದ್ಯ ಸೇವಿಸಿ ಬೈಕ್ ನಲ್ಲಿ ಠಾಣೆಗೆ ಬಂದಿದ್ದ ಕಾರಣ ನೀಡಿದ ,ಪೊಲೀಸರು ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣ ದಾಖಲಿಸಿದ್ದರು.

ಮದ್ಯ ಸೇವಿಸಿದ್ದರಿಂದ ಬೈಕ್ ಠಾಣೆಯಲ್ಲಿ ಬಿಟ್ಟು ಹೋಗುವಂತೆ ಪಿಎಸ್ ಐ ಸೂಚಿಸಿದರು ಎನ್ನಲಾಗಿದೆ .ಇದರಿಂದ ನೊಂದ ಯುವಕ ,ತನಗೆ ಮಾನಸಿಕ ಕಿರುಕುಳ ನೀಡುತಿದ್ದಾರೆ ಎಂದು ಠಾಣೆಯ ಎದುರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಗೆ
ಯತ್ನಿಸಿದ ‌. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪೊಲೀಸರು ಆತನ ರಕ್ಷಣೆಗೆ ಮುಂದಾಗಿದ್ದರು. ಸುಟ್ಟಗಾಯಳಿಂದ ಅಸ್ವಸ್ಥ‌ನಾದ ಆತನನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಿದ್ದರು‌

ಈ ಮಧ್ಯೆ ಪಿ.ಎಸ್.ಐ ವಿರುದ್ಧಮಾನಸಿಕ ಕಿರುಕುಳದ ವಿಡಿಯೋ ಮಾಡಿದ್ದ.

ಗಂಭೀರ ಗಾಯಗೊಂಡ ಭಾಸ್ಕರ್ ಬೆಳಗಾವಿ ಖಾಸಗಿ ಆಸ್ಪತ್ರೆಗೆ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.‌
…..

Latest Indian news

Popular Stories