ಮಂಗಳೂರು: ಕೆಲ ದಿನಗಳ ಹಿಂದೆ ನಗರದ ಬಿಜೈಯಿಂದ ನಾಪತ್ತೆಯಾಗಿದ್ದ 18 ವರ್ಷದ ಯುವತಿಯೋರ್ವಳು ಉಡುಪಿ ಜಿಲ್ಲೆಯ ಕಾರ್ಕಳದ ಮನೆಯೊಂದರಲ್ಲಿ ಪತ್ತೆಯಾಗಿದ್ದಾಳೆ.
ಡಿಪ್ಲೋಮಾ ಕಲಿಯುತ್ತಿದ್ದ ಬಿಜೈಯ ಕ್ಯಾಲಿಸ್ಟರ್ ಫೆರಾವೋ ನಾಪತ್ತೆಯಾಗಿರುವುದಾಗಿ ಜುಲೈ 30ರಂದು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಯುವತಿ ಕಾರ್ಕಳದ ಸೂರಜ್ ಪೂಜಾರಿ (23) ಎಂಬಾತನ ಮನೆಯಲ್ಲಿ ಇರುವುದು ತಿಳಿದು ಬಂದಿದೆ.
ಬರ್ಕೆ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆ ತಂದಿದ್ದು, ಈ ವೇಳೆ ಇಬ್ಬರೂ ಪರಸ್ಪರ ಪ್ರೀತಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಅಲ್ಲದೇ ತಾನು ಹೆತ್ತವರ ಜೊತೆ ಹೋಗುವುದಿಲ್ಲ ಎಂದು ಯುವತಿ ಹೇಳಿದ ಹಿನ್ನೆಲೆಯಲ್ಲಿ ಯುವತಿಯನ್ನು ಸಮಾಲೋಚನಾ ಕೇಂದ್ರಕ್ಕೆ ಕಳುಹಿಸಲಾಗಿದೆ.