ಮುಂಡಗೋಡ ಹಾರವಳ್ಳಿ ಬಳಿ ಅಪಘಾತ: ಮಾಜಿ ಶಾಸಕ ಅಪಾಯದಿಂದ ಪಾರು

ಕಾರವಾರ: ಹಾರವಳ್ಳಿ ಎಂಬಲ್ಲಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಾಜಿ ಶಾಸಕ ವಿ.ಎಸ್.ಪಾಟೀಲ್ ಅವರ ಎದೆಗೆ ಪೆಟ್ಟು ಬಿದ್ದಿದೆ. ಬನವಾಸಿ ಯಿಂದ ಅವರು ಪಾಳ ಮಾರ್ಗವಾಗಿ ಸ್ವಂತ ಊರಾದ ಅಂದಲಗಿ ಗೆ ತೆರಳುತ್ತಿದ್ದರು ಎನ್ನಲಾಗಿದೆ.

Screenshot 2024 03 08 17 10 24 59 6012fa4d4ddec268fc5c7112cbb265e7 Featured Story

ಚಾಲಕನ ನಿಯಂತ್ರಣ ತಪ್ಪಿ ಕಾರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಕಾರ್ ನ ಏರ್ ಬ್ಯಾಗ್ ಓಪನ್ ಆದ ಕಾರಣ ಹೆಚ್ಚಿನ ಅಪಾಯ ತಪ್ಪಿದೆ. ಒಮ್ಮೆ ಯಲ್ಲಾಪುರ ಮುಂಡಗೋಡ ಶಾಸಕರಾಗಿ ಅವರು ಆಯ್ಕೆಯಾಗಿ ಐದು ವರ್ಷ ಪೂರೈಸಿದ್ದರು.

ಸಜ್ಜನರಾದ ವಿ.ಎಸ್.ಪಾಟೀಲ್ ಈಗ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಅವರ ಕಾರ್ ಚಾಲಕನ ಕಣ್ಣಿಗೆ ಪೆಟ್ಟು ಬಿದ್ದಿದೆ. ಚಿಕಿತ್ಸೆಗೆ ಹಾರವಳ್ಳಿ ಗ್ರಾಮಸ್ಥರು ಅವರನ್ನು ದಾಖಲಿಸಿದ್ದಾರೆ.

Latest Indian news

Popular Stories