ಈದ್ ಅಲ್-ಅದ್ಹಾದ ಕುರಿತು “ಪ್ರೌಡ್ ವೆಜಿಟೇರಿಯನ್” ಟ್ವೀಟ್ ಕುರಿತು ಸ್ವರಾ ಭಾಸ್ಕರ್ ತೀಕ್ಷ್ಣ ಪ್ರತಿಕ್ರಿಯೆ | ಹಸುವಿಗೆ ಬಲವಂತವಾಗಿ ಗರ್ಭ ಧರಿಸುವಂತೆ ಮಾಡಿ ಕರುವಿನಿಂದ ಬೇರ್ಪಡಿಸಿ ಹಾಲು ಹೀರುವ ಕ್ರೌರ್ಯ ನೆನಪಿಸಿದ ನಟಿ!

ಬಾಲಿವುಡ್ ತಾರೆ ಸ್ವರಾ ಭಾಸ್ಕರ್ ಅವರು ಈದ್ ಅಲ್-ಅದ್ಹಾ ಆಚರಣೆಯ ಸಂದರ್ಭದಲ್ಲಿ ಮಾಡಿದ ವಿವಾದಾತ್ಮಕ ಟ್ವೀಟ್‌ಗಾಗಿ ಪ್ರಸಿದ್ಧ ಆಹಾರ ಬ್ಲಾಗರ್ ನಳಿನಿ ಉನಗರ್ ಅವರಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಉನಗರ್ ತನ್ನ ಸಸ್ಯಾಹಾರಿ ಭೋಜನದ ಚಿತ್ರವನ್ನು X (ಹಿಂದೆ ಟ್ವಿಟರ್) ಗೆ ಈದ್ ಅಲ್-ಅಧಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಪ್ರಾಣಿ ಬಲಿಯ ಸಂಪ್ರದಾಯಕ್ಕೆ ಹೆಸರುವಾಸಿಯಾದ ಪ್ರಮುಖ ಇಸ್ಲಾಮಿಕ್ ರಜಾದಿನವಾಗಿದೆ. ವಿವಾದಕ್ಕೆ ಕಾರಣವಾದ ಫೋಟೋಗೆ ವಿವರಣೆ ನೀಡುತ್ತಾ, “ನಾನು ಸಸ್ಯಾಹಾರಿಯಾಗಲು ಸಂತೋಷಪಡುತ್ತೇನೆ. ನನ್ನ ತಟ್ಟೆಯಲ್ಲಿ ಕಣ್ಣೀರು ಇಲ್ಲ, ಕ್ರೂರತೆ ಇಲ್ಲ, ಅಪರಾಧವಿಲ್ಲ.” ಎಂದು ಬರೆದು ಕೊಂಡಿದ್ದಾರೆ.

ಸಾಮಾಜಿಕ ಮತ್ತು ರಾಜಕೀಯ ವಿಷಯಗಳಲ್ಲಿ ತನ್ನ ಪ್ರಾಮಾಣಿಕತೆಗಾಗಿ ಗುರುತಿಸಲ್ಪಟ್ಟ ಸ್ವರಾ ಭಾಸ್ಕರ್ ಉನಗರ್ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಿಜ ಹೇಳಬೇಕೆಂದರೆ… ಸಸ್ಯಾಹಾರಿಗಳ ಈ ದುರಹಂಕಾರ ಮೀತಿ ಮೀರಿದೆ. ನಿಮ್ಮ ಇಡೀ ಆಹಾರ ಪದ್ಧತಿ ಹಸುಗಳನ್ನು ಬಲವಂತವಾಗಿ ಗರ್ಭಧರಿಸಿ ಅವುಗಳ ಕರುಗಳಿಂದ ಬೇರ್ಪಡಿಸುವ ಕ್ರೂರತೆಯೊಂದಿಗೆ ಬೆಸೆದಿದೆ. ನಂತರ ಹಾಲು ತೆಗೆದು ನೀವು ಸೇವಿಸುತ್ತೀರಿ” ಎಂದು ಭಾಸ್ಕರ್ ಎಕ್ಸ್‌ನಲ್ಲಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಅಷ್ಟಕ್ಕೇ ಸುಮ್ಮನಾಗದ ಭಾಸ್ಕರ್, ಸಸ್ಯಾಹಾರಿಗಳು ಬೇರು ತರಕಾರಿಗಳನ್ನು ತಿನ್ನುತ್ತಾರೆ ಎಂದು ಟೀಕಿಸಿದರು. “ನೀವು ಬೇರು ತರಕಾರಿಗಳನ್ನು ತಿನ್ನುತ್ತೀರಾ? ಅದು ಸಸ್ಯವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ಇದು ಬಕ್ರೀದ್ ಆಗಿರುವುದರಿಂದ ಸದ್ಗುಣದ ಸಂಕೇತದೊಂದಿಗೆ ವಿಶ್ರಾಂತಿ ಪಡೆಯಿರಿ” ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಇದೀಗ ಭಾಸ್ಕರ್ ಅವರ ಪ್ರತಿಕ್ರಿಯೆ ಉನಗರ್ ಪೋಸ್ಟ್ ಬಹಳಷ್ಟು ಪರ ವಿರೋಧ ಚರ್ಚೆ ಹುಟ್ಟು ಹಾಕಿದೆ. ಈ ಪೋಸ್ಟ್ ನೊಂದಿಗೆ ಸಸ್ಯಹಾರ ಎಂಬ ಸ್ವಯಂ ಘೋಷಿತ ಸಭ್ಯತೆ ಹಿಂದಿನ ಕ್ರೌರ್ಯತೆ ಕೂಡ ಚರ್ಚೆಗೆ ಬಂದಿದ್ದು ಮನುಷ್ಯನ ಆಹಾರ ಹಕ್ಕಿನ ಕುರಿತು ಚರ್ಚೆ ಆರಂಭವಾಗಿದೆ.

Latest Indian news

Popular Stories