ಸನಾತನ ಧರ್ಮವನ್ನು ಎಚ್.ಐ.ವಿಗೆ ಹೋಲಿಸಿ ಮೋದಿ, ಅಮಿತ್ ಶಾರನ್ನು ಚರ್ಚೆಗೆ ಆಹ್ವಾನಿಸಿದ ಡಿ.ಎಮ್.ಕೆ ನಾಯಕ ಎ ರಾಜಾ

ಡಿಎಂಕೆ ನಾಯಕ ಮತ್ತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮ ವಿರೋಧಿ ಹೇಳಿಕೆಗಳನ್ನು ಡೆಂಗ್ಯೂ ಮತ್ತು ಕೋವಿಡ್ -19 ಗೆ ಹೋಲಿಕೆ ಮಾಡಿದ ಆರೋಪದ ನಂತರ ಇಡೀ ದೇಶದಲ್ಲಿ ಚರ್ಚೆ ನಡೆಯುತ್ತಿರುವಾಗಲೇ ಕೇಂದ್ರದ ಮಾಜಿ ಸಚಿವ ಎ ರಾಜಾ ಈಗ ಅದನ್ನು ‘ಎಚ್‌ಐವಿ’ ಮತ್ತು ಕುಷ್ಟರೋಗಕ್ಕೆ ಹೋಲಿಸಿದ್ದಾರೆ.

“ಉದಯನಿಧಿ ಸ್ಟಾಲಿನ್ ಅವರು ಸನಾತನ ಸಂಸ್ಥೆಯ ಬಗ್ಗೆ ಮೃದು ಸ್ವರದಲ್ಲಿ ಮಾತನಾಡಿದ್ದಾರೆ. ಅದನ್ನು ಮಲೇರಿಯಾ ಮತ್ತು ಡೆಂಗ್ಯೂಗೆ ಹೋಲಿಸಿದ್ದಾರೆ. ಆದರೆ ಇದನ್ನು ಎಚ್ಐವಿ ಅಥವಾ ಕುಷ್ಠರೋಗ ಎಂದು ನೋಡಬೇಕು. ಇದನ್ನು ಸಮಾಜಘಾತುಕ ಕಾಯಿಲೆಯಂತೆ ನೋಡಬೇಕು,” ಎಂದು ಸಾರ್ವಜನಿಕ ಸಮಾರಂಭವೊಂದರಲ್ಲಿ ಹೇಳಿದ್ದಾರೆ.

ಈ ವಿಷಯದ ಬಗ್ಗೆ ಬಹಿರಂಗ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಸಂದರ್ಭದಲ್ಲಿ ಸವಾಲು ಹಾಕಿದರು.

“ನೀವು ದೆಹಲಿಯಲ್ಲಿ ನನ್ನೊಂದಿಗೆ ಸನಾತನ ಧರ್ಮದ ಕುರಿತು ಚರ್ಚೆ ನಡೆಸಲು ಶಂಕರಾಚಾರ್ಯರು, ಪುರೋಹಿತರು, ಮತ್ತು ನಿಮ್ಮ ಎಲ್ಲಾ ಅಸ್ತ್ರಗಳೊಂದಿಗೆ 10 ಲಕ್ಷ ಅಥವಾ 1 ಕೋಟಿ ಬೆಂಬಲಿಗರೊಂದಿಗೆ ಬನ್ನಿ. ಪೆರಿಯಾರ್ ಮತ್ತು ಅಂಬೇಡ್ಕರ್ ಪುಸ್ತಕಗಳನ್ನು ನನ್ನ ಅಸ್ತ್ರವನ್ನಾಗಿ ಇಟ್ಟುಕೊಂಡು ಮಾತ್ರ ನಿಮ್ಮನ್ನು ಎದುರಿಸುತ್ತೇನೆ. ಡೇಟ್ ಫಿಕ್ಸ್ ಮಾಡಿ ನಾನು ಬರಲು ರೆಡಿಯಾಗಿದ್ದೇನೆ ಎಂದರು.

Latest Indian news

Popular Stories