ಕುಮಾರಸ್ವಾಮಿಗೆ ಕೃಷಿ ಖಾತೆ ಮಿಸ್​: ಜೋಶಿ, ಶೋಭಾ, ಸೋಮಣ್ಣಗೆ ಯಾವ ಖಾತೆ?

ನರೇಂದ್ರ ಮೋದಿ ಸಂಪುಟದಲ್ಲಿ ಈ ಬಾರಿ ಕರ್ನಾಟಕದಿಂದ ಆಯ್ಕೆಯಾದ ಐವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ. ಮೂವರಿಗೆ ಕ್ಯಾಬಿನೆಟ್​ ದರ್ಜೆ ಸಚಿವ ಸ್ಥಾನ ಸಿಕ್ಕರೆ, ಇನ್ನುಳಿದ ಇಬ್ಬರಿಗೆ ರಾಜ್ಯ ಖಾತೆ ಸಿಕ್ಕಿದೆ.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್, ಧಾರವಾಡದ ಪ್ರಲ್ಹಾದ್ ಜೋಶಿ, ಮಂಡ್ಯದ ಎಚ್​ಡಿ ಕುಮಾರಸ್ವಾಮಿ ಅವರಿಗೆ ಕ್ಯಾಬಿನೆಟ್​ ದರ್ಜೆ ಸಚಿವ ಸ್ಥಾನ ಸಿಕ್ಕಿದ್ದರೆ, ಬೆಂಗಳೂರು ಉತ್ತರ ಕ್ಷೇತ್ರದ ಶೋಭಾ ಕರಂದ್ಲಾಜೆ ಹಾಗೂ ತುಮಕೂರು ಕ್ಷೇತ್ರದ ವಿ ಸೋಮಣ್ಣ ಅವರಿಗೆ ರಾಜ್ಯ ಖಾತೆ ಸಚಿವ ಸ್ಥಾನ ದೊರೆತಿದೆ.

ಮಂಡ್ಯದಿಂದ ಗೆದ್ದು ಸಂಸತ್ ಪ್ರವೇಶ ಮಾಡಿರುವ ಜೆಡಿಎಸ್​-ಬಿಜೆಪಿ ಮೈತ್ರಿ ಸಂಸದ ಎಚ್​ಡಿ ಕುಮಾರಸ್ವಾಮಿ ಅವರು ಮೋದಿ ಸರ್ಕಾರದಲ್ಲಿ ಕ್ಯಾಬಿನೆಟ್​ ದರ್ಜೆ ಸಚಿವರಾಗಿದ್ದಾರೆ. ಆದ್ರೆ, ಕುಮಾರಸ್ವಾಮಿ ಬಯಸಿದ್ದ ಖಾತೆ ಮಿಸ್ ಆಗಿದೆ. ಕೃಷಿ ಖಾತೆ ಮೇಲೆ ಕಣ್ಣಿಟ್ಟಿದ್ದ ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ನೀಡಲಾಗಿದೆ. ಇನ್ನು ಕೃಷಿ ಖಾತೆ ಶಿವರಾಜ್ ಸಿಂಗ್ ಚೌಹಾಣ್ ಪಾಲಾಗಿದೆ.

ಕರ್ನಾಟಕ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರೂ ಸಹ ಎರಡನೇ ಬಾರಿಗೆ ಮೋದಿ ಸಂಪುಟದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದು, ಈ ಬಾರಿಯೂ ಸಹ ಅವರಿಗೆ ಹಣಕಾಸು ಇಲಾಖೆ ನೀಡಲಾಗಿದೆ. ಕಳೆದ ಬಾರಿ ಸರ್ಕಾರದಲ್ಲೂ ನಿರ್ಮಲಾ ಸೀತಾರಾಮಾನ್ ಅವರು ಹಣಕಾಸು ಇಲಾಖೆ ಖಾತೆ ಸಚಿವೆಯಾಗಿದ್ದರು.

ಕಳೆದ ಬಾರಿ ಸಂಸದೀಯ ವ್ಯವಹಾರ ಖಾತೆ ಸಚಿವರಾಗಿದ್ದ ಪ್ರಹ್ಲಾದ್ ಜೋಶಿ ಅವರಿಗೆ ಈ ಬಾರಿ ಬದಲಾವಣೆ ಮಾಡಲಾಗಿದ್ದು, ಇದೀಗ ಅವರಿಗೆ ಮಹತ್ವದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ನೀಡಲಾಗಿದೆ. ಇದರ ಜೊತೆಗೆ ನವೀಕರಿಸಬಹುದಾದ ಇಂಧನ ಇಲಾಖೆಯ ಜವಾಬ್ದಾರಿ ಸಹ ನೀಡಲಾಗಿದೆ.
ಬೆಂಗಳೂರು ಉತ್ತರದಿಂದ ಗೆದ್ದು ಮೋದಿ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವೆಯಾಗಿರುವ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಸೂಕ್ಷ್ಮ, ಸಣ್ಣ ,ಮಧ್ಯಮ ಕೈಗಾರಿಕೆ ರಾಜ್ಯ ಖಾತೆ ನೀಡಲಾಗಿದೆ. ಕಳೆದ ಬಾರಿ ಸರ್ಕಾರದಲ್ಲಿ ರಾಜ್ಯ ಕೃಷಿ ಖಾತೆ ನೀಡಲಾಗಿತ್ತು.

ಜಲ ಶಕ್ತಿ ರಾಜ್ಯ ಖಾತೆ ಮತ್ತು ರೈಲ್ವೆ ಸಚಿವಾಲಯದ ರಾಜ್ಯ ಖಾತೆ ನೀಡಲಾಗಿದೆ. ಸೋಮಣ್ಣ ಅವರಗೆ ಎರೆಡೆರಡು ರಾಜ್ಯ ಖಾತೆ ನೀಡುವುದು ವಿಶೇಷವಾಗಿದೆ.

ಖಾತೆ ವಿವರ:

ರಾಜನಾಥ್ ಸಿಂಗ್-ರಕ್ಷಣ

ಅಮಿತ್ ಶಾ-ಗೃಹ

ಜೆ ಪಿ ನಡ್ಡಾ-ಆರೋಗ್ಯ

ಶಿವರಾಜ್ ಸಿಂಗ್ ಚೌಹಾಣ್-ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ

ಪ್ರಹ್ಲಾದ್ ಜೋಶಿ- ಆಹಾರ ಮತ್ತು ನಾಗರಿಕ ವ್ಯವಹಾರಗಳು, ನವೀಕರಿಸಬಹುದಾದ ಇಂಧನ ಶಕ್ತಿ

ಅಶ್ವಿನಿ ವೈಷ್ಣವ್-ರೈಲ್ವೆ ,ಮಾಹಿತಿ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ

ಗಿರಿರಾಜ್ ಸಿಂಗ್- ಜವಳಿ

ಜ್ಯೋತಿರಾದಿತ್ಯ ಸಿಂಧಿಯಾ- ಟೆಲಿಕಾಂ,ಈಶಾನ್ಯ ರಾಜ್ಯಗಳ ವ್ಯವಹಾರ

ಭೂಪೇಂದ್ರ ಯಾದವ್-ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ

ಗಜೇಂದ್ರ ಸಿಂಗ್ ಶೇಖಾವತ್ -ಸಂಸ್ಕೃತಿ ಮತ್ತು ಪ್ರವಾಸೋದ್ಯಮ

ಅನ್ನಪೂರ್ಣ ದೇವಿ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ

ಕಿರಣ್ ರಿಜಿಜು- ಸಂಸದೀಯ ವ್ಯವಹಾರ ಖಾತೆ, ಅಲ್ಪಸಂಖ್ಯಾಕ

ಮನ್ಸುಖ್ ಮಾಂಡವಿಯಾ- ಕಾರ್ಮಿಕ ಮತ್ತು ಉದ್ಯೋಗ ಖಾತೆ /ಯುವಜನ ಮತ್ತು ಕ್ರೀಡೆ

ಹರ್ದೀಪ್ ಸಿಂಗ್ ಪುರಿ-ಪೆಟ್ರೋಲಿಯಂ

ಜಿ.ಕೆ. ರೆಡ್ಡಿ-ಕಲ್ಲಿದ್ದಲು ಮತ್ತು ಗಣಿ

ಚಿರಾಗ್ ಪಾಸ್ವಾನ್- ಆಹಾರ ಸಂಸ್ಕರಣಾ ಉದ್ಯಮಗಳು

ಸಿಆರ್ ಪಾಟೀಲ್- ಜಲಶಕ್ತಿ

ನಿರ್ಮಲಾ ಸೀತಾರಾಮನ್-ಹಣಕಾಸು

ಡಾ. ಎಸ್ ಜೈಶಂಕರ್-ವಿದೇಶಾಂಗ

ಮನೋಹರ್ ಲಾಲ್ ಖಟ್ಟರ್-ಇಂಧನ,ವಸತಿ ಮತ್ತು ನಗರಾಭಿವೃದ್ದಿ ಸಚಿವಾಲಯ

ಎಚ್. ಡಿ. ಕುಮಾರಸ್ವಾಮಿ- ಉಕ್ಕು ಮತ್ತು ಬೃಹತ್ ಕೈಗಾರಿಕೆ 

ಪಿಯೂಷ್ ಗೋಯಲ್-ವಾಣಿಜ್ಯ

ಪ್ರಹ್ಲಾದ್ ಜೋಶಿ- ಆಹಾರ ಮತ್ತು ನಾಗರಿಕ ವ್ಯವಹಾರಗಳು, ನವೀಕರಿಸಬಹುದಾದ ಇಂಧನ ಶಕ್ತಿ

ಅಶ್ವಿನಿ ವೈಷ್ಣವ್-ರೈಲ್ವೆ ,ಮಾಹಿತಿ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ

ಗಿರಿರಾಜ್ ಸಿಂಗ್- ಜವಳಿ

ಜ್ಯೋತಿರಾದಿತ್ಯ ಸಿಂಧಿಯಾ- ಟೆಲಿಕಾಂ,ಈಶಾನ್ಯ ರಾಜ್ಯಗಳ ವ್ಯವಹಾರ

ಭೂಪೇಂದ್ರ ಯಾದವ್-ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ

ಗಜೇಂದ್ರ ಸಿಂಗ್ ಶೇಖಾವತ್ -ಸಂಸ್ಕೃತಿ ಮತ್ತು ಪ್ರವಾಸೋದ್ಯಮ

ಅನ್ನಪೂರ್ಣ ದೇವಿ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ

ಕಿರಣ್ ರಿಜಿಜು- ಸಂಸದೀಯ ವ್ಯವಹಾರ ಖಾತೆ, ಅಲ್ಪಸಂಖ್ಯಾಕ

ಮನ್ಸುಖ್ ಮಾಂಡವಿಯಾ- ಕಾರ್ಮಿಕ ಮತ್ತು ಉದ್ಯೋಗ ಖಾತೆ /ಯುವಜನ ಮತ್ತು ಕ್ರೀಡೆ

ಹರ್ದೀಪ್ ಸಿಂಗ್ ಪುರಿ-ಪೆಟ್ರೋಲಿಯಂ

ಜಿ.ಕೆ. ರೆಡ್ಡಿ-ಕಲ್ಲಿದ್ದಲು ಮತ್ತು ಗಣಿ

ಚಿರಾಗ್ ಪಾಸ್ವಾನ್- ಆಹಾರ ಸಂಸ್ಕರಣಾ ಉದ್ಯಮಗಳು

ಸಿಆರ್ ಪಾಟೀಲ್- ಜಲಶಕ್ತಿ

ಧರ್ಮೇಂದ್ರ ಪ್ರಧಾನ್- ಶಿಕ್ಷಣ

ಜೀತನ್ ರಾಮ್ ಮಾಂಝಿ-ಸೂಕ್ಷ್ಮ, ಸಣ್ಣ ಮಧ್ಯಮ ಕೈಗಾರಿಕೆ

ರಾಜೀವ್ ರಂಜನ್ (ಲಾಲನ್) ಸಿಂಗ್- ಪಂಚಾಯತ್ ರಾಜ್ ಮತ್ತು ಮೀನುಗಾರಿಕೆ

ಸರ್ಬಾನಂದ ಸೋನೋವಾಲ್-ಬಂದರು ಮತ್ತು ಒಳನಾಡು ಸಾರಿಗೆ

ಕಿಂಜರಾಪು ರಾಮ್ ಮೋಹನ್ ನಾಯ್ಡು- ನಾಗರಿಕ ವಿಮಾನಯಾನ

ವೀರೇಂದ್ರ ಕುಮಾರ್- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

ಜುಯಲ್ ಓರಮ್- ಬುಡಕಟ್ಟು ವ್ಯವಹಾರ

ನಿತಿನ್ ಗಡ್ಕರಿ- ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಸ್ವತಂತ್ರ ಖಾತೆ
ಇಂದ್ರಜಿತ್ ಸಿಂಗ್

ಜಿತೇಂದ್ರ ಸಿಂಗ್

ಅರ್ಜುನ್ ರಾಮ್ ಮೇಘವಾಲ್

ಪ್ರತಾಪ್ರಾವ್ ಜಾಧವ್

ಜಯಂತ್ ಚೌಧರಿ

ರಾಜ್ಯ ಖಾತೆ

ಜಿತಿನ್ ಪ್ರಸಾದ್

ಶ್ರೀಪಾದ್ ನಾಯ್ಕ್- ಇಂಧನ ರಾಜ್ಯ

ಪಂಕಜ್ ಚೌಧರಿ

ಕ್ರಿಶನ್ ಪಾಲ್ ಗುರ್ಜರ್

ರಾಮದಾಸ್ ಅಠವಳೆ

ರಾಮನಾಥ್ ಠಾಕೂರ್

ನಿತ್ಯಾನಂದ ರಾಯ್

ಅನುಪ್ರಿಯಾ ಪಟೇಲ್

ವಿ.ಸೋಮಣ್ಣ

ಚಂದ್ರಶೇಖರ್ ಪೆಮ್ಮಸಾನಿ

ಎಸ್ ಪಿ ಸಿಂಗ್ ಬಘೇಲ್

ಶೋಭಾ ಕರಂದ್ಲಾಜೆ-ಸೂಕ್ಷ್ಮ, ಸಣ್ಣ ಮಧ್ಯಮ ಕೈಗಾರಿಕೆ ರಾಜ್ಯ ಖಾತೆ

ಕೀರ್ತಿ ವರ್ಧನ್ ಸಿಂಗ್

ಬಿ.ಎಲ್. ವರ್ಮಾ

ಶಂತನು ಠಾಕೂರ್ -ಬಂದರು ಮತ್ತು ಒಳನಾಡು ಸಾರಿಗೆ ರಾಜ್ಯ ಖಾತೆ

ಕಮಲೇಶ್ ಪಾಸ್ವಾನ್

ಬಂಡಿ ಸಂಜಯ್ ಕುಮಾರ್

ಅಜಯ್ ತಮ್ತಾ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಖಾತೆ

ಡಾ.ಎಲ್.ಮುರುಗನ್-

ಸುರೇಶ್ ಗೋಪಿ-ಸಂಸ್ಕೃತಿ ಮತ್ತು ಪ್ರವಾಸೋದ್ಯಮ ರಾಜ್ಯ ಖಾತೆ

ರವನೀತ್ ಸಿಂಗ್ ಬಿಟ್ಟು- ಅಲ್ಪಸಂಖ್ಯಾಕ ರಾಜ್ಯ ಖಾತೆ

ಸಂಜಯ್ ಸೇಠ್

ರಕ್ಷಾ ಖಡ್ಸೆ

ಭಗೀರಥ ಚೌಧರಿ

ಸತೀಶ್ ಚಂದ್ರ ದುಬೆ

ದುರ್ಗಾದಾಸ್ ಯುಕೆಯ್

ಸುಕಾಂತ ಮಜುಂದಾರ್

ಸಾವಿತ್ರಿ ಠಾಕೂರ್

ತೋಖಾನ್ ಸಾಹು

ರಾಜ್ ಭೂಷಣ ಚೌಧರಿ

ಭೂಪತಿ ರಾಜು ಶ್ರೀನಿವಾಸ ವರ್ಮ

ಹರ್ಷ್ ಮಲ್ಹೋತ್ರಾ-ರಾಜ್ಯ ಖಾತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು

ನಿಮುಬೆನ್ ಬಂಬಾನಿಯಮ್

ಮುರಳೀಧರ ಮೊಹೋಲ್

ಜಾರ್ಜ್ ಕುರಿಯನ್

ಪಬಿತ್ರಾ ಮಾರ್ಗರಿಟಾ

Latest Indian news

Popular Stories