ತೆಲಂಗಾಣ ಚುನಾವಣೆ: ಬಿಜೆಪಿಯಿಂದ ರಾಜ ಸಿಂಗ್ ಅಮಾನತು ಹಿಂಪಡೆಯುವ ಸಾಧ್ಯತೆ

ಹೈದರಾಬಾದ್ : ತೆಲಂಗಾಣ ವಿಧಾನಸಭಾ ಚುನಾವಣೆಗೆ ಮುನ್ನ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೋಶಾಮಹಲ್ ಶಾಸಕ ಟಿ ರಾಜಾ ಸಿಂಗ್ ಅವರ ಅಮಾನತು ಹಿಂಪಡೆಯಲು ಯೋಚಿಸುತ್ತಿದೆ. ಪಕ್ಷದ ವ್ಯವಹಾರಗಳ ಮುಖ್ಯಸ್ಥ ಸುನಿಲ್ ಬನ್ಸಾಲ್ ಅವರು ಕೇಂದ್ರ ನಾಯಕತ್ವಕ್ಕೆ ಕಳುಹಿಸಿದ ವರದಿಯಲ್ಲಿ ರಾಜಾ ಸಿಂಗ್ ಅವರ ಅಮಾನತು ರದ್ದುಗೊಳಿಸುವಂತೆ ಶಿಫಾರಸು ಮಾಡಿದ್ದಾರೆ ಮತ್ತು ಅವರನ್ನು ಗೋಶಾಮಹಲ್ ಅಭ್ಯರ್ಥಿಯನ್ನಾಗಿ ಹೆಸರಿಸುವಂತೆ ಸೂಚಿಸಿದ್ದಾರೆ.

ಈ ಕ್ರಮವು ತೆಲಂಗಾಣ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷದ ಹಿಂದುತ್ವ ಸಿದ್ಧಾಂತದ ಬಗ್ಗೆ ಪಕ್ಷದ ಇಮೇಜ್ ಅನ್ನು ಕಾಪಾಡುವ ಪ್ರಯತ್ನವೆಂದು ಪರಿಗಣಿಸಲಾಗಿದೆ.

ಕಳೆದ ವರ್ಷ ಪ್ರವಾದಿ ಮೊಹಮ್ಮದ್ ರ ಕುರಿತು ವಿವಾದಾತ್ಮ ಹೇಳಿಕೆಯ ವಿಡಿಯೋ ವಿವಾದ ಹುಟ್ಟು ಹಾಕಿತ್ತು‌ ಇದು ಮುಸ್ಲಿಂ ಸಮುದಾಯದ ಪ್ರತಿಭಟನೆಗೆ ಕಾರಣವಾಯಿತು ಮತ್ತು ನಂತರ ಅವರನ್ನು ಪೊಲೀಸರು ಬಂಧಿಸಿದರು.ಬಿಜೆಪಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿತ್ತು.

Latest Indian news

Popular Stories