ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಖರ್ಗೆ ವಾಗ್ದಾಳಿ

2023 9largeimg 1863036221 Featured Story, National, Politics, State News

ನವದೆಹಲಿ: ವೈಧ್ಯಕೀಯ ಕಾರಣಗಳಿಂದ ಕರ್ತವ್ಯನಿರ್ವಹಿಸಲಾಗದ ಸೈನಿಕರಿಗೆ ನೀಡಲಾಗುವ ಪಿಂಚಣಿಯ ಹೊಸ ನೀತಿಗಳ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ ಮಾಡಿರುವ ಅವರು, ವೈಧ್ಯಕೀಯ ಕಾರಣಗಳಿಂದ ಕರ್ತವ್ಯನಿರ್ವಹಿಸಲಾಗದ ಸೈನಿಕರ ಪಿಂಚಣಿಯ ಹೊಸ ನೀತಿಗಳಿಂದ ಬಿಜೆಪಿಯ ಹುಸಿ ರಾಷ್ಟ್ರೀಯತೆ ಗೋಚರವಾಗುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸೈನಿಕರು, ಮಾಜಿ ಸೇನಾ ಸಿಬ್ಬಂದಿಯ ಕಲ್ಯಾಣದ ವಿರುದ್ಧ ಕೆಲಸ ಮಾಡುವಲ್ಲಿ ಯಾವಾಗಲೂ ನಿರತವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಸ್ತುತ, ಶೇಕಡ 40ರಷ್ಟು ಸೈನಿಕರು ವೈದ್ಯಕೀಯ ಕಾರಣಗಳಿಂದ ಕರ್ತವ್ಯ ನಿರ್ವಹಿಸಲು ಅಸಮರ್ಥರಾಗಿದ್ದಾರೆ. ಪ್ರಸ್ತುತ ನೀತಿಯು ಈ ಹಿಂದಿನ ಅನೇಕ ತೀರ್ಪುಗಳು, ನಿಯಮಗಳು ಮತ್ತು ಸ್ವೀಕಾರಾರ್ಹ ಮಾನದಂಡಗಳನ್ನು ಉಲ್ಲಂಘಿಸುತ್ತದೆ. 2019ರ ಜೂನ್ನಲ್ಲಿ ಸಹ ಈ ಪಿಂಚಣಿ ಮೇಲೆ ತೆರಿಗೆ ಹೇರುವುದಾಗಿ ಘೋಷಿಸಿದ್ದ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಆಗಲೂ ಸೈನಿಕರಿಗೆ ದ್ರೋಹ ಎಸಗಿತ್ತ’ ಎಂದು ಕಿಡಿಕಾರಿದ್ದಾರೆ.

Latest Indian news

Popular Stories