ಮೈತ್ರಿ ಸರಕಾರ: ನರೇಂದ್ರ ಮೋದಿ ಜೊತೆ ಪ್ರಮಾಣವಚನ ಸ್ವೀಕರಿಸಲಿರುವ 62 ಸಚಿವರ ಅಂತಿಮ ಪಟ್ಟಿ!

ನವದೆಹಲಿ: ತೀವ್ರ ಸಮಾಲೋಚನೆಯ ನಂತರ NDA 3.0 ಇದೀಗ ಒಂದೆರಡು ಗಂಟೆಗಳಲ್ಲಿ ರಚನೆಯಾಗುತ್ತಿದೆ. ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಸಂಜೆಯ ನಂತರ ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ಇಂದಿನ ಪ್ರಮಾಣ ವಚನ ಸಮಾರಂಭಕ್ಕೆ ಹೆಸರುಗಳ ಅಂತಿಮ ಪಟ್ಟಿಯನ್ನು ದೃಢಪಡಿಸುವ ಮೂಲಕ ನಿರಂತರತೆ ಮತ್ತು ಹೊಸ ಮುಖಗಳ ನಡುವೆ ಸಮತೋಲನವನ್ನು ಸಾಧಿಸಲು ಪ್ರಯತ್ನಿಸುತ್ತದೆ.

ಮಾಧ್ಯಮ ವರದಿಗಳ ಪ್ರಕಾರ, ಇಂದು ಸುಮಾರು 30 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪೂರ್ಣ ಪ್ರಮಾಣದ ಮಂತ್ರಿಮಂಡಲದ ಬಲವು 78 ಮತ್ತು 82ರ ನಡುವೆ ಇರಲಿದೆ. ಪ್ರಮುಖ ನಾಲ್ಕು ಖಾತೆಗಳನ್ನು (ಗೃಹ, ರಕ್ಷಣೆ, ವಿದೇಶಾಂಗ ವ್ಯವಹಾರಗಳು ಮತ್ತು ಹಣಕಾಸು) ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನಲ್ಲೇ ಉಳಿಸಿಕೊಳ್ಳುವ ನಿರೀಕ್ಷೆಯಿದೆ.

ಇತ್ತೀಚಿಗೆ ಮುಕ್ತಾಯಗೊಂಡ 2024ರ ಚುನಾವಣೆಯಲ್ಲಿ, ನರೇಂದ್ರ ಮೋದಿಯವರ ಬಿಜೆಪಿಯು ಅದರ ಹಿಂದಿನ ಪ್ರಚಂಡ ಗೆಲುವಿಗೆ ಈ ಬಾರಿ ಕಡಿವಾಣ ಬಿದ್ದಿದೆ. ಈ ಬಾರಿ ಬಿಜೆಪಿ 240 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.

ಎನ್‌ಡಿಎಯ ಬಿಜೆಪಿಯೇತರ ಸದಸ್ಯರ ಪೈಕಿ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನತಾ ದಳ-ಯುನೈಟೆಡ್ (ಜೆಡಿ-ಯು) ಸಚಿವ ಸ್ಥಾನಗಳಲ್ಲಿ ಸಿಂಹಪಾಲು ಪಡೆಯುವ ನಿರೀಕ್ಷೆಯಿದೆ. ಜೆಡಿ (ಯು) ಮತ್ತು ಲೋಕ ಜನಶಕ್ತಿ ಪಕ್ಷ- ಚಿರಾಗ್ ಪಾಸ್ವಾನ್ ಅವರ ರಾಮ್‌ವಿಲಾಸ್ (ಎಲ್‌ಜೆಪಿ-ಆರ್) ನಡುವೆ ರೈಲ್ವೇ ಖಾತೆಗಾಗಿ ತೀವ್ರ ಜಟಾಪಟಿ ನಡೆಯುತ್ತಿದೆ.

ಇಂದು ಪ್ರಮಾಣವಚನ ಸ್ವೀಕರಿಸಲಿರುವ ಸಂಸದರು!

– ನಿತಿನ್ ಗಡ್ಕರಿ

-ರಾಜನಾಥ್ ಸಿಂಗ್

-ಪಿಯೂಷ್ ಗೋಯಲ್

-ಜ್ಯೋತಿರಾದಿತ್ಯ ಸಿಂಧಿಯಾ

-ಕಿರೆನ್ ರಿಜಿಜು

-ಎಚ್.ಡಿ.ಕುಮಾರಸ್ವಾಮಿ

-ಚಿರಾಗ್ ಪಾಸ್ವಾನ್

-ಜೆಪಿ ನಡ್ಡಾ

-ರಾಮ್ ನಾಥ್ ಠಾಕೂರ್

-ಜಿತನ್ ರಾಮ್ ಮಾಂಜಿ

-ಜಯಂತ್ ಚೌಧರಿ

-ಅನುಪ್ರಿಯಾ ಪಟೇಲ್

-ರಾಮಮೋಹನ್ ನಾಯ್ಡು

-ಚಂದ್ರಶೇಖರ್ ಪೆಮ್ಮಸಾನಿ

-ಪ್ರತಾಪ್ ರಾವ್ ಜಾಧವ್ (ಎಸ್‌ಎಸ್)

– ಲಲನ್ ಸಿಂಗ್

-ರಾಮದಾಸ್ ಬಂಡು ಅಠವಳೆ

– ಅಮಿತ್ ಶಾ

-ಅರ್ಜುನ್ ಮೇಘವಾಲ್

-ಶಿವರಾಜ್ ಸಿಂಗ್ ಚೌಹಾಣ್

-ಜ್ಯೋತಿರಾದಿತ್ಯ ಸಿಂಧಿಯಾ

-ಮನೋಹರ್ ಖಟ್ಟರ್

-ರಾವ್ ಇಂದರ್‌ಜಿತ್ ಸಿಂಗ್

-ಕಮಲ್ಜೀತ್ ಸೆಹ್ರಾವತ್

– ರಕ್ಷಾ ಖಡ್ಸೆ

– ಭೂಪೇಂದರ್ ಯಾದವ್

-ಜುಯಲ್ ಓರಾನ್

-ಎಸ್. ಜೈಶಂಕರ್

-ವೀರೇಂದ್ರ ಕುಮಾರ್

-ಎಸ್ಪಿಎಸ್ ಬಾಘೆಲ್

-ಎಲ್ ಮುರುಗನ್

-ಬಿಎಲ್ ವರ್ಮಾ

– ಪಂಕಜ್ ಚೌಧರಿ

– ಶಿವರಾಜ್ ಸಿಂಗ್ ಚೌಹಾಣ್

– ಅನ್ನಪೂರ್ಣ ದೇವಿ

Latest Indian news

Popular Stories