ಮಹಿಳೆಯಿಂದ ಮದುವೆಗೆ ಒತ್ತಾಯ | ಸುತ್ತಿಗೆಯಿಂದ ತಲೆಗೆ ಹೊಡೆದು ಕೊಂದ ವಿವಾಹಿತ ಸೇನಾಧಿಕಾರಿ ರಾಮೇಂದು ಉಪಾಧ್ಯಾಯ – ಬಂಧನ

ಡೆಹ್ರಾಡೂನ್:

ಪಶ್ಚಿಮ ಬಂಗಾಳದ ಸಿಲಿಗುರಿಯ ಡ್ಯಾನ್ಸ್ ಬಾರ್‌ನಲ್ಲಿ ನೇಪಾಳಿ ಮಹಿಳೆಯನ್ನು ಕೊಂದಿದ್ದಕ್ಕಾಗಿ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಿಯೋಜಿಸಲಾದ ಸೇನೆಯ ಲೆಫ್ಟಿನೆಂಟ್ ಕರ್ನಲ್ ಅನ್ನು ಬಂಧಿಸಲಾಗಿದೆ ಎಂದು ಡೆಹ್ರಾಡೂನ್ ಪೊಲೀಸರು ತಿಳಿಸಿದ್ದಾರೆ. ಸೋಮವಾರ ಸಿರ್ವಾಲ್ ಗಡ್ ಪ್ರದೇಶದಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವಿಗೀಡಾದ ಮಹಿಳೆಯ ಶವವನ್ನು ಪತ್ತೆ ಹಚ್ಚಲಾಗಿತ್ತು.

ಮಹಿಳೆ ನೇಪಾಳದವರಾಗಿದ್ದು, ಸಿಲಿಗುರಿಯಲ್ಲಿ ವಾಸವಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

ಕ್ಲೆಮೆಂಟ್ ಟೌನ್ ಕಂಟೋನ್ಮೆಂಟ್ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ರಾಮೇಂದು ಉಪಾಧ್ಯಾಯ ಅವರು ವಿವಾಹೇತರ ಸಂಬಂಧ ಹೊಂದಿದ್ದು, 30 ವರ್ಷದ ಮಹಿಳೆ ಮದುವೆಯಾಗುವಂತೆ ಒತ್ತಡ ಹೇರಲು ಪ್ರಾರಂಭಿಸಿದ ನಂತರ ಆಕೆಯನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಡಿತ್ವಾರಿ ಪ್ರೇಮ್ ನಗರದಲ್ಲಿರುವ ಅವರ ಮನೆಯಿಂದ ಅವರನ್ನು ಬಂಧಿಸಲಾಗಿದೆ.

ಸಂತ್ರಸ್ತೆ, ಶ್ರೇಯಾ ಶರ್ಮಾ, ಸಿಲಿಗುರಿಯ ಡ್ಯಾನ್ಸ್ ಬಾರ್‌ನಲ್ಲಿ ಆರೋಪಿಯನ್ನು ಭೇಟಿಯಾಗಿದ್ದರು.ನಂತರ ಅವರ ಸಂಬಂಧ ಮೂರು ವರ್ಷಗಳ ಕಾಲ ಮುಂದುವರೆಯಿತು. ಡೆಹ್ರಾಡೂನ್‌ಗೆ ವರ್ಗಾವಣೆಯಾದಾಗ, ಶ್ರೇಯಾಳನ್ನು ತನ್ನೊಂದಿಗೆ ಡೆಹ್ರಾಡೂನ್‌ಗೆ ಕರೆತಂದನು, ಅಲ್ಲಿ ಅವನು ಅವಳಿಗೆ ಬಾಡಿಗೆಗೆ ಫ್ಲಾಟ್ ತೆಗೆದುಕೊಟಿದ್ದ ಎಂದು ವಿಚಾರಣೆಯ ವೇಳೆ ಒಪ್ಪಿಕೊಂಡಿರುವ ಕುರಿತು ಪೊಲೀಸರು ತಿಳಿಸಿದ್ದಾರೆ.

ಉಪಾಧ್ಯಾಯ ಅವರು ಶನಿವಾರ ರಾತ್ರಿ ರಾಜ್‌ಪುರ ರಸ್ತೆಯ ಕ್ಲಬ್‌ನಲ್ಲಿ ಮಹಿಳೆಯೊಂದಿಗೆ ಮದ್ಯ ಸೇವಿಸಿದ್ದರು ಮತ್ತು ಆಕೆಯನ್ನು ಲಾಂಗ್ ಡ್ರೈವ್‌ಗೆ ಕರೆದೊಯ್ಯಲು ಮುಂದಾದರು. ಅದಕ್ಕೆ ಆಕೆ ಒಪ್ಪಿದ್ದಾಳೆ. ಆದರೆ, ನಗರದ ಹೊರವಲಯದಲ್ಲಿರುವ ನಿರ್ಜನ ಪ್ರದೇಶವಾದ ಥಾನೋ ರಸ್ತೆ ತಲುಪಿದ ಬಳಿಕ ರಾತ್ರಿ 1:30ರ ಸುಮಾರಿಗೆ ಕಾರು ನಿಲ್ಲಿಸಿ ಮಹಿಳೆಯ ತಲೆಗೆ ಸುತ್ತಿಗೆಯಿಂದ ಪದೇ ಪದೇ ಹೊಡೆದು ಸಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೇಯಾಳನ್ನು ಕೊಂದ ನಂತರ ಉಪಾಧ್ಯಾಯ ಆಕೆಯ ಶವವನ್ನು ರಸ್ತೆಬದಿಯಲ್ಲಿ ಎಸೆದು ಓಡಿದ್ದಾನೆ.

ಸೇನಾಧಿಕಾರಿ ಈಗಾಗಲೇ ಮದುವೆಯಾಗಿದ್ದು, ಆಕೆ ಮದುವೆಯಾಗುವಂತೆ ಒತ್ತಡ ಹೇರಿದ್ದಲು ಎಂದು ತಿಳಿದು ಬಂದಿದೆ.ಆ ಕಾರಣಕ್ಕಾಗಿ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

Latest Indian news

Popular Stories