ಹಣ ಡಬಲ್ ಮಾಡಿ ಕೊಡುವುದಾಗಿ ಬೆದರಿಸಿದ ವ್ಯಕ್ತಿಯ ಬಂಧನ: ಬಂಧಿತ ಗೂಂಡಾ ಪಟ್ಟಿಯಲ್ಲಿರುವ ರಾಕೇಶ್ ವಾಲೇಕಾರ್

ಕಾರವಾರ : ಒಂದು ಲಕ್ಷ ಹಣ ನೀಡಿದರೆ ಡಬಲ್ ಮಾಡಿ ಕೊಡುವುದಾಗಿ ಬೆದರಿಸಿ, ಯುವಕನೋರ್ವನಿಂದ ಬೈಕ್ ಕಿತ್ತುಕೊಂಡಿದ್ದ ಆರೋಪಿತನನ್ನು ಹಳಿಯಾಳ ಪೊಲೀಸ್ ಠಾಣೆಯ ಸಿಬ್ಬಂದಿಗಳು ಬಂಧಿಸಿದ್ದಾರೆ.

ಪಟ್ಟಣದ ಚವ್ವಾಣ ಪ್ಲಾಟ್ ನಿವಾಸಿಯಾಗಿರುವ ರಾಕೇಶ ದಿನಕರ ವಾಲೇಕರ ಬಂಧಿತ ಆರೋಪಿಯಾಗಿದ್ದಾನೆ.

ರಾಕೇಶ್ ವಾಲೀಕಾರ್ ಪಟ್ಟಣದ ಕಾನ್ವೆಂಟ್ ರಸ್ತೆ ನಿವಾಸಿ ರಾಹುಲ್ ಜಯವಂತ ವಾಣಿ ಎಂಬ ಯುವಕನನ್ನು ಸಂಪರ್ಕಿಸಿ, ನನಗೆ 1 ಲಕ್ಷ ನೀಡು, ನಿನಗೆ ದುಪ್ಪಟ್ಟು ಮಾಡಿ ಕೊಡುತ್ತೆನೆ ಎಂದು ಮೊದಲು ಅಮಿಷ ಒಡ್ಡಿದ್ದಾನೆ.

ಆಗ , ರಾಹುಲ್ ನನ್ನ ಬಳಿ ಅಷ್ಟು ಹಣವಿಲ್ಲ ಎಂದು ತಿಳಿಸಿದ್ದಾನೆ. ಆದರೆ ಗೂಂಡಾ ಪ್ರವೃತ್ತಿ ಹೊಂದಿರುವ ರಾಕೇಶ್ ಯುವಕ ರಾಹುಲ್ ನನ್ನು ಹೆದರಿಸಿ, ಆತನ ಬಳಿ ಇದ್ದ ಒಂದೂವರೆ ಲಕ್ಷ ರೂ. ಬೆಲೆಯ ರಾಯಲ್ ಎನ್ಫಿಲ್ಡ್ ಕೆಎ-65, ಜೆ-1393 ಬೈಕ್ ಅನ್ನು ಪಡೆದು ಪರಾರಿಯಾಗಿದ್ದ.

ಬಳಿಕ ಈ ಕುರಿತು ರಾಹುಲ್ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ರಾಕೇಶ್ ನನ್ನು ಬಂಧಿಸಿದ್ದಾರೆ.

*ರಾಕೇಶನದು ಅಪರಾಧಿ ಹಿನ್ನೆಲೆ:* ಬಂಧಿತ ರಾಕೇಶ್ ವಿರುದ್ಧ ಹಳಿಯಾಳ ಹಾಗೂ ಅಂಬಿಕಾ ನಗರ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಅಂಬಿಕಾನಗರ ಠಾಣೆಯಲ್ಲಿ ಗೂಂಡಾ ಪಟ್ಟಿಯಲ್ಲಿರುವ ರಾಕೇಶ್ ಹಲವು ಸಮಾಜ ವಿರೋಧಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಕುರಿತು ಸಹ ಪ್ರಕರಣಗಳು ದಾಖಲಾಗಿವೆ.

ಮೂಲತಃ ಹಳಿಯಾಳ ತಾಲೂಕಿನ ಮಂಗಳವಾಡ ಗ್ರಾಮದ ರಾಕೇಶ್ ಅನೇಕರಿಗೆ ಮೊಸ, ವಂಚನೆ ಮಾಡಿದ ಬಗ್ಗೆ ದೂರುಗಳಿವೆ. ಅಲ್ಲದೇ ತನ್ನ ದುಷ್ಕೃತ್ಯಗಳಿಂದ ಬಚಾವಾಗಲು ಈತನು ಅಯ್ಯಪ್ಪ ಸ್ವಾಮಿ ಮಾಲೆಯನ್ನು ಧರಿಸಿಕೊಂಡು ಓಡಾಡುತ್ತಿದ್ದ. ವೃತಾಚರಣೆಯ ಮುಗಿದರು ಸಹ ಮಾಲೆಯನ್ನು ತೆಗೆಯದೆ ಹಿಂದೂ ಧರ್ಮದ ವಿರುದ್ಧ ನಡೆದುಕೊಂಡಿರುವ ಕುರಿತು ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಸ್ಥಳೀಯ ಅಯ್ಯಪ್ಪ ದೇವಸ್ಥಾನ ಕಮಿಟಿಯವರು ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಅಲ್ಲದೇ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಯುವಕನೊರ್ವನ ಮೇಲೆ ಹಲ್ಲೆ ಮಾಡಿದ ಪ್ರಕರಣವು ಇದೆ.

ಇನ್ನೂ ಹಳಿಯಾಳ ನ್ಯಾಯಾಲಯದಲ್ಲಿ ಅನೇಕ ಚೆಕ್ ಬೌನ್ಸ್ ಪ್ರಕರಣಗಳನ್ನು ದಾಖಲಿಸಿ, ಜನರಿಗೆ ವಂಚಿಸುತ್ತಿದ್ದ ಎಂದು ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ .
…….

Latest Indian news

Popular Stories