ವರುಣ್ ಗಾಂಧಿ ಏನು ಮಾಡುತ್ತಾರೆ ಅವರನ್ನೇ ಕೇಳಿ: ಮೇನಕಾ ಗಾಂಧಿ

ಸುಲ್ತಾನ್‌ಪುರ: ವರುಣ್‌ ಗಾಂಧಿಗೆ ಬಿಜೆಪಿ ಟಿಕೆಟ್‌ ತಪ್ಪಿರುವುದರ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿರುವ ಮೇನಕಾ ಗಾಂಧಿ, “ವರಣ್‌ ಏನು ಮಾಡುತ್ತಾರೆ ಎಂಬುದನ್ನು ಅವರನ್ನೇ ಕೇಳಿ’ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಮಾತನಾಡಿದ ಅವರು, ವರುಣ್‌ ಗಾಂಧಿ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಚುನಾವಣೆಯ ಬಳಿಕ ಯೋಚನೆ ಮಾಡುತ್ತೇವೆ. ಇದಕ್ಕೆ ನಮ್ಮ ಬಳಿ ಸಮಯವಿದೆ ಎಂದರು.

“ಬಿಜೆಪಿ ಜತೆ ಇರುವುದಕ್ಕೆ ಖುಷಿಯಾಗುತ್ತಿದೆ. ನನಗೆ ಟಕೆಟ್‌ ನೀಡಿದ್ದಕ್ಕೆ ಪ್ರಧಾನಿ ಮೋದಿ, ಅಮಿತ್‌ ಶಾ ಅವರಿಗೆ ಕೃತಜ್ಞತೆಗಳು’ ಎಂದು ಪ್ರತಿಕ್ರಿಯೆ ನೀಡಿದ್ದಾರೆ

Latest Indian news

Popular Stories