ಅಹಮದಾಬಾದ್ ಮೋದಿ ಮೈದಾನಕ್ಕಿಂತ ದೊಡ್ಡ ಕ್ಷುದ್ರ ಗ್ರಹ ಭೂಮಿಯನ್ನು ಸಮೀಪಿಸಲಿದೆ – ಇಸ್ರೋ ಎಚ್ಚರಿಕೆ!

ನವದೆಹಲಿ: ಭಾರತದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಮೈದಾನಕ್ಕಿಂತ ದೊಡ್ಡದಾದ ಕ್ಷುದ್ರಗ್ರಹವೊಂದು ಭೂಮಿಯನನ್ನು ಸಮೀಪಿಸಲಿದೆ. ಈ ಸಮಯದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಇಸ್ರೋ ಹೇಳಿದೆ.

2029ರಲ್ಲಿ ಈ ಕ್ಷುದ್ರ ಗ್ರಹ ಭೂಮಿಯ ಸಮೀಪಕ್ಕೆ ಬರದಲಿದೆ. ಹಲವು ಅಧ್ಯಯನಗಳ ಪ್ರಕಾರ ಇದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇಲ್ಲ. ಆದರೆ ಭೂಮಿಗೆ 32,000 ಕಿ.ಮೀ. ಹತ್ತಿರಕ್ಕೆ ಬರುವ ಕಾರಣ ಅಪಾಯವನ್ನು ಎದುರಿಸಲು ಸಿದ್ಧವಾಗಿರಬೇಕಾಗುತ್ತದೆ. ಇದಕ್ಕೆ ಯಾವುದೇ ದೇಶ ಮುಂದಾದರೂ ನಾವು ಅವರಿಗೆ ಸಹಾಯ ಮಾಡುತ್ತೇವೆ ಎಂದು ಇಸ್ರೋ ಮುಖ್ಯಸ್ಥ ಎಸ್‌.ಸೋಮನಾಥ್‌ ಹೇಳಿದ್ದಾರೆ.

ಈ ಕ್ಷುದ್ರಗ್ರಹಕ್ಕೆ ಅಪೋಫಿಸ್‌ ಎಂದು ಹೆಸರಿಡಲಾಗಿದ್ದು, 2004ರಲ್ಲಿ ಮೊದಲ ಬಾರಿ ಇದನ್ನು ಪತ್ತೆ ಹಚ್ಚಲಾಯಿತು. ಇದು 2029 ಹಾಗೂ 2036ರಲ್ಲಿ ಭೂಮಿಯನ್ನು ಸಮೀಪಿಸಲಿದೆ. ಈ ಕ್ಷುದ್ರಗ್ರಹದ ವ್ಯಾಸ 340ರಿಂದ 450 ಮೀ.ನಷ್ಟಿದೆ. 140 ಮೀ. ವ್ಯಾಸಕ್ಕಿಂತ ದೊಡ್ಡದಾದ ಯಾವುದೇ ಕ್ಷುದ್ರಗ್ರಹವನ್ನು ಭೂಮಿಯಲ್ಲಿ ವಿನಾಶಕಾರಿ ಎಂದು ಕರೆಯಲಾಗುತ್ತದೆ. ಹೀಗಾಗಿ ಇದರ ಬಗ್ಗೆ ಇಸ್ರೋ ಎಚ್ಚರಿಕೆ ನೀಡಿದೆ.

Latest Indian news

Popular Stories