ಕಾನಗೂಡ ಗ್ರಾಮದಲ್ಲಿ ಯೋಧ ನ ಮೇಲೆ ಹಲ್ಲೆ : ನ್ಯಾಯಕ್ಕಾಗಿ ಮೊರೆ

ಕಾರವಾರ : ಕಾನಗೋಡ ಗ್ರಾಮದಲ್ಲಿ ಹೊಸ ಮನೆ ಕಟ್ಟಿದ್ದು, ಮನೆಯ ಜಾಗದ ಬಗ್ಗೆ ತಕರಾರು ತೆಗೆದ ಪ್ರಕಾಶ್ ನಾಯ್ಕ, ಗೋಪಾಲ ನಾಯ್ಕ , ತಿಮ್ಮಪ್ಪ ನಾಯ್ಕ ಹಾಗೂ ಕುಟುಂಬದವರು ನನ್ನ ಹಾಗೂ ನನ್ನ ತಂದೆತಾಯಿಯ ಮೇಲೆ ಸಾಮೂಹಿಕವಾಗಿ ಹಲ್ಲೆ ಮಾಡಿದರು ಎಂದು ಯೋಧ ರಂಗನಾಥ ಆಚಾರಿ ಅಪಾದಿಸಿದರು‌ .

ಕಾರವಾರದ ಪತ್ರಿಕಾಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಮಾಡಿದ ಅವರುಬ
ಕಾನಗೂಡ ಗ್ರಾಮದಲ್ಲಿ ಕಾನೂನು ಪ್ರಕಾರ ಹಳೆಯ ಮನೆ ಹಾಗೂ ಜಾಗ ಖರಿದೀಸಿದ್ದು, ಅಲ್ಲಿ ಹೊಸ ಮನೆ ಕಟ್ಟಿ, ಗೃಹ ಪ್ರವೇಶದ ವೇಳೆ ಮೂರು ಕುಟುಂಬದವರು ಸಾಮೂಹಿಕ ದಾಳಿ ಮಾಡಿ ಥಳಿಸಿದ್ದಾರೆ. ತಂದೆ ತಾಯಿ ಆಸ್ಪತ್ರೆಯಲ್ಲಿದ್ದು, ನಾನು ನ್ಯಾಯಕ್ಕಾಗಿ ಅಲೆಯುತ್ತಿದ್ದೇನೆ ಎಂದರು. ಭಾರತ ಚೀನಾ ಗಡಿಯಲ್ಲಿ ಕೆಲಸ ಮಾಡುವ ನನಗೆ ನ್ಯಾಯಯುತ ವಾಗಿ ಜಾಗ ಖರಿದೀಸಿ ,‌ ನಿರ್ಮಿಸಿದ ಮನೆಯಲ್ಲಿ ಇರಲು ಅವಕಾಶವಾಗುತ್ತಿಲ್ಲ. ಈ ಬಗ್ಗೆ ಕಂದಾಯ, ಸರ್ವೆ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದ್ದೇನೆ. ಈಗ ಶಿರಸಿಯ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದೇನೆ ಎಂದು ಯೋಧ ರಂಗನಾಥ ಹೇಳಿದರು.
ಕಾನೂಡು ಗ್ರಾಮಸ್ಥ ಲಕ್ಷ್ಮಿ ನಾರಾಯಣ ಹೆಗಡೆ ಮಾತನಾಡಿ ಬಾಳೂರು ಗ್ರಾಮದ ನಿವಾಸಿ ರಂಗನಾಥ ಯೋಧರಾಗಿ ಕೆಲಸ ಮಾಡಿ ದೇಶ ಕಾಯುವವರು. ಅವರು ನ್ಯಾಯದ ಮಾರ್ಗದಲ್ಲಿ ಕಾನಗೋಡನಲ್ಲಿ ಭೂಮಿ ಖರಿದೀಸಿ ಮನೆ ಕಟ್ಟಿದ್ದರು. 1886 ರಿಂದ ಭೂಮಿಯ ಹಾಗೂ ಗ್ರಾಮದ ನಕಾಶೆ ನನ್ನ ಬಳಿ ಇದೆ. 2003 ರತನಕ ಗ್ರಾಮದ ನಕಾಶೆ ಸರಿಯಾಗಿದೆ. 2015-16 ರಲ್ಲಿ ಪೋಡಿ ಮುಕ್ತ ಗ್ರಾಮ ಮಾಡುವಾಗ ಸರ್ವೇಯರ್ ಮಾಡಿದ ತಪ್ಪಿನಿಂದ ಯೋಧ ನೋವು ಅನುಭವಿಸುವಂತಾಗಿದೆ. ಕಾನಗೋಡ ಗ್ರಾಮದಲ್ಲಿ ೧ ರಿಂದ ೨೫೩ ತನಕ ಸರ್ವೆ ನಂಬರ್ ಇವೆ. 2016ರ‌ ಭೂ ನಕಾಶೆಯಲ್ಲಿ ಉತ್ತರದ ಸರ್ವೆ ನಂಬರ್ ಗಳ ಭೂಮಿಯನ್ನು ‌ದಕ್ಷಿಣಕ್ಕೂ,‌ದಕ್ಷಿಣದ ಸರ್ವೆನಂಬರಗಳ ಭೂಮಿಯನ್ನು ಉತ್ತರಕ್ಕೂ ತೋರಿಸಲಾಗಿದೆ. ದಾರಿಯ ವಿಸ್ತೀರ್ಣ ಕಿರಿದು ಮಾಡಲಾಗಿದೆ. ಇದನ್ನು ಸರಿ ಪಡಿಸಬೇಕು. ಪ್ಲೇನ್ ಟೆಬಲ್ ಸರ್ವೆ ಹಾಗೂ ಬ್ರಿಟಿಷ್ ಕಾಲದ ಗ್ರಾಮ ನಕಾಶೆ, 2003 ರ ನಕಾಶೆ ಯನ್ನು ತೆರೆದು ನೋಡಬೇಕು. ‌ಆಗ ಯೋಧ ರಂಗನಾಥ ಆಚಾರಿಗೆ ನ್ಯಾಯ ಸಿಗಲು ಸಾಧ್ಯ ಎಂದರು. ಕಾನಗೋಡ ಗ್ರಾಮದ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Latest Indian news

Popular Stories